- Advertisement -
ಸಹಾಯಕ ಮಹಾನಿರೀಕ್ಷಕ ಮಧುಸೂದನ್ ಮನೆ ಮೇಲೆ ಇಂದು ಎಸಿಬಿ ದಾಳಿಯನ್ನು ಮಾಡಿದ್ದಾರೆ. ಎಸಿಬಿ ದಾಳಿ ವೇಳೆ 2.3 ಕೆ ಜಿ ಚಿನ್ನಾಭರಣ 9 ಕೆಜಿ ಬೆಳ್ಳಿ, 39 ಲಕ್ಷ ನಗದು ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳಿಂದ ಹಣ, ಚಿನ್ನಾಭರಣವನ್ನು ತಲಾಶ್ ಮಾಡಲಾಗಿದ್ದು, ಮಧುಸೂದನ್ ಮನೆಯಲ್ಲಿದ್ದ ಅಪಾರ ಪ್ರಮಾಣದ ಹಣ, ಚಿನ್ನಾಭರಣವನ್ನು ನೋಡಿ ಎಸಿಬಿ ಅಧಿಕಾರಿಗಳಿಗೆ ಶಾಕ್ ಆಗಿದ್ದಾರೆ.
ರಾಜಾಜಿನಗರದಲ್ಲಿರುವ ಮಧುಸೂದನ್ ಮನೆ ಮೇಲೆ ಇಂದು ದಾಳಿ ಮಾಡಿದ ಎಸಿಬಿ ಅಧಿಕಾರಿಗಳಿಗೆ, ಅಪಾರ ಪ್ರಮಾಣದ ಚಿನ್ನಾಭರರಣ, ನಗದು ಪತ್ತೆಯಾಗಿದೆ. ಸದ್ಯ ಮಧುಸೂದನ್ ಮನೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿಯನ್ನು ಮುಂದುವರೆಸಿದ್ದಾರೆ. ಬೆಳಗ್ಗೆ 5 ಗಂಟೆಯಿಂದ ಎಸಿಬಿ ಅಧಿಕಾರಿಗಳಿಂದ ದಾಳಿ ಪ್ರಾರಂಭವಾಗಿದ್ದು, ಪರಿಶೀಲನೆ ಮುಂದುವರೆದಿದೆ.
- Advertisement -