Thursday, December 12, 2024

Latest Posts

ಅನುಪಮಾ ಸೀರಿಯಲ್ ಸೆಟ್‌ನಲ್ಲಿ ಶಾಕಿಂಗ್ ಘಟನೆ: ಕ್ಯಾಮರಾಮ್ಯಾನ್ ಸಹಾಯಕ ಸಾವು

- Advertisement -

Bollywood News: ಪ್ರಖ್ಯಾತ ಹಿಂದಿ ಸಿರಿಯಲ್ ಅನುಪಮಾ ಸಿರಿಯಲ್ ಸೆಟ್‌ನಲ್ಲಿ ಅವಘಡ ಸಂಭವಿಸಿ, ಶಾಕ್ ತಗುಲಿ ಕ್ಯಾಮರಾಮ್ಯಾನ್ ಸಹಾಯಕ ಸಾವನ್ನಪ್ಪಿದ್ದಾನೆ.

ಮುಂಬೈನ ಗೋರೇಗಾಂವ ಫಿಲ್ಮ್ ಸಿಟಿಯಲ್ಲಿ ಈ ಅವಘಡ ಸಂಭವಿಸಿದ್ದು, ಇಲ್ಲೇ ಅನುಪಮಾ ಸಿರಿಯಲ್ ಸೆಟ್ ಹಾಕಲಾಗಿತ್ತು. ಈ ವೇಳೆ ವಿದ್ಯುತ್ ಶಾಕ್ ತಗುಲಿ ಸಹಾಯಕ ಅಸ್ವಸ್ಥನಾಗಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಆತ ಸಾವನ್ನಪ್ಪಿದ್ದಾನೆ. ಈ ಕುರಿತು ಮುಂಬೈನ ಆರೆ ಕಾಲಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಯಿ ವೀಡಿಯೋ ಎಂಬ ಸಂಸ್ಥೆಯಿಂದ ವೀಡಿಯೋ ಬಾಡಿಗೆಗೆ ತೆಗೆದುಕೊಳ್ಳಲಾಗಿತ್ತು. ಹಾಗಾಗಿ ಅಲ್ಲಿನ ಸಹಾಯಕನನ್ನೇ ಅನುಪಮಾ ಸಿರಿಯಲ್‌ ಸೆಟ್‌ಗೆ ಕಳುಹಿಸಿಕೊಡಲಾಗಿತ್ತು. ಆದರೆ ದುರಾದೃಷ್ಟವಶಾತ್, ಇಷ್ಟು ಪ್ರಖ್ಯಾತ ಸಿರಿಯಲ್ ಟೀಂ ಜೊತೆ ಕೆಲಸ ಮಾಡುವಾಗಲೇ, ಈ ವ್ಯಕ್ತಿ ಶಾಕ್ ಹೊಡೆದು ಸಾವನ್ನಪ್ಪಿದ್ದಾನೆ. ಹಾಗಾಗಿ ಸಿರಿಯಲ್ ಸೆಟ್‌ನಿಂದ ಜೊತೆ ಸಾಯಿ ವೀಡಿಯೋ ಸಂಸ್ಥೆಯಿಂದಲೂ, ಮೃತನ ಕುಟುಂಬಕ್ಕೆ ಸ್ವಲ್ಪ ಪರಿಹಾರ ನೀಡಲಾಗಿದೆ.

ಅಲ್ಲದೇ ಆ ವ್ಯಕ್ತಿ ಬಿಹಾರದವರಾಾಗಿದ್ದು, ಅವರ ಮನೆಗೆ ಮೃತದೇಹ ಕೊಂಡೊಯ್ಯಲು ತಗಲುವ ವೆಚ್ಚವನ್ನೂ ಸಹ ಕಂಪನಿ ನೀಡಿದೆ ಎನ್ನಲಾಗಿದೆ.

- Advertisement -

Latest Posts

Don't Miss