Friday, March 14, 2025

Latest Posts

ಖಾತೆ ಹಂಚಿಕೆ ಮಾಡುವುದು ಸಿಎಂ ಗೆ ಬಿಟ್ಟ ವಿಚಾರ ; ಸಚಿವ ಸೋಮಣ್ಣ

- Advertisement -

www.karnatakatv.net : ರಾಯಚೂರು: ಸಿಎಂ ನೀಡಿದ ಖಾತೆ ಬಗ್ಗೆ ಅಸಮಾಧಾನವಿಲ್ಲ. ಯಾವುದೇ ಖಾತೆ ಕೊಟ್ಟರೂ ನಾನು ನನ್ನ ಸ್ಟೈಲ್ ನಲ್ಲೇ ಕೆಲಸ ಮಾಡ್ತೀನಿ ಎಂದ ಸಚಿವ ಸೋಮಣ್ಣ. ರಾಯಚೂರಿನಲ್ಲಿ ಘನತ್ಯಾಜ್ಯ ಸಾಗಣೆ ವಾಹನಗಳ ಲೋಕಾರ್ಪಣೆ ನಂತರ ಹೇಳಿಕೆ ನೀಡಿದ್ದಾರೆ . ಖಾತೆ ಹಂಚಿಕೆ ಮಾಡುವುದು ಸಿಎಂ ಗೆ ಬಿಟ್ಟ ವಿಚಾರ.. ಸಿಎಂ ಅನುಭವಿಗಳಿದ್ದಾರೆ.. ಅವರು ಖಾತೆ ನೀಡುವ ವೇಳೆಯೇ ಆಲೋಚಿಸಿರುತ್ತಾರೆ.. ಮೊದಲ ಬಾರಿಗೆ ಸಚಿವನಾಗಿದ್ದಾಗ ಬಂದೀಖಾನೆ ಖಾತೆ, ನಂತರ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲಾಗಿತ್ತು. ಅನೇಕ ಖಾತೆಗಳನ್ನು ನಿಭಾಯಿಸಿದ ಅನುಭವ ನನಗಿದೆ ಎಂದ ಸಚಿವ ಸೋಮಣ್ಣ ಅವರು ಹೇಳಿದರು.

ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡದೇ ವಾಪಸಾ ಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಬೆಂಗಳೂರಿನಿಂದ ಕರೆ ಬಂದಿದೆ. ತುರ್ತಾಗಿ ತೆರಳಬೇಕಿದೆ. ಹೀಗಾಗಿ ಹೋಗುತ್ತಿರುವೆ. ಆ.೧೬ ರಿಂದ ನಾಲ್ಕು ದಿನ ಜಿಲ್ಲೆಯಲ್ಲೇ ಇರುವೆ. ಆಡಳಿತದಲ್ಲಿ ಅವ್ಯವಸ್ಥೆ ಸಾಕಷ್ಟಿದೆ. ಆಡಳಿತ ಸುಧಾರಣೆ ಮಾಡದೇ ಎಲ್ಲಿಗೇ ಭೇಟಿ ನೀಡಿದರೂ ವ್ಯರ್ಥ. ಅಧಿಕಾರಿಗಳಲ್ಲಿ ಯಾವುದಕ್ಕೂ ಸಮರ್ಪಕ ಮಾಹಿತಿಯಿಲ್ಲ ಎಂದು ಸಿಡಿಮಿಡಿಗೊಂಡ ಸಚಿವ ಸೋಮಣ್ಣ, ಎಲ್ಲ ಅಧಿಕಾರಿಗಳು ನನ್ನ ಸ್ಟೈಲ್ ಗೆ ಸೆಟ್ ಆಗಬೇಕಷ್ಟೇ ಎಂದು ತಾಕೀತು ಮಾಡಿದರು.

- Advertisement -

Latest Posts

Don't Miss