ಬೆಂಗಳೂರು: ತನ್ನ ಪ್ರೀತಿಯನ್ನು ಒಪ್ಪಿಕೋ ಒಪ್ಪಿಕೋ ಎಂದು ಯುವತಿಯ ಹಿಂದೆ ಬಿದ್ದಂತ ಯುವಕನ ಪ್ರೀತಿಯನ್ನು ಆಕೆ ನಿರಾಕರಿಸಿದ್ದಾರೆ. ಈ ಕಾರಣಕ್ಕೆ ಸಿಟ್ಟಾದಂತ ಪಾಗಲ್ ಪ್ರೇಮಿಯೊಬ್ಬ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿರೋ ಘಟನೆ, ಸಿಲಿಕಾನ್ ಸಿಟಿಯ ಸುಂಕದಕಟ್ಟೆಯಲ್ಲಿ ನಡೆದಿದೆ.
ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಇಂದು ಪ್ರೀತಿ ನಿರಾಕರಿಸಿದಂತ ಪಾಗಲ್ ಪ್ರೇಮಿ ನಾಗೇಶ್ ಎಂಬಾತ 23 ವರ್ಷದ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿ, ಪರಾರಿಯಾಗಿರೋ ಘಟನೆ ನಡೆದಿದೆ. ಆ್ಯಸಿಡ್ ದಾಳಿಗೆ ಒಳಗಾದಂತ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವಂತ ಯುವಕ ನಾಗೇಶ್ ಎಂಬಾತನ ಪತ್ತೆಗೆ ಪೊಲೀಸರು ಬಲೆ ಮೀಸಿದ್ದಾರೆ.




