Wednesday, December 4, 2024

Latest Posts

ವರದಿ ಬಂದ 24 ಗಂಟೆಗಳಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮ : ಗೃಹ ಸಚಿವ ಬೊಮ್ಮಯಿ

- Advertisement -

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಹಿರೇನಾಗವೇಲಿಯ ಕ್ವಾರಿ ಸ್ಫೋಟದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಯಿ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಯಿ, ಕಲ್ಲು ಕ್ವಾರಿಯಲ್ಲಿದ್ದ ಸ್ಫೋಟಕ ವಸ್ತುಗಳನ್ನು ಬೇರೆ ಕಡೆ ಸಾಗಿಸುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿರುವ ಸಾಧ್ಯತೆ ಇದ್ದು, ಸ್ಫೋಟಕಗಳನ್ನು ಸಾಗಿಸುತ್ತಿದ್ದ ಆರು ಕಾರ್ಮಿಕರು ಮೃತ ಪಟ್ಟಿದ್ದಾರೆ. ಅಧಿಕಾರಿಗಳ ಪ್ರಥಮ ತನಿಖೆಯ ವರದಿಯ ಪ್ರಕಾರ, ಪೆಟ್ರೋಲಿಯಂ ಜೆಲ್ ಎಕ್ಸ್ ಪ್ಲೋಸಿವ್ ಮತ್ತು ಅಮೋನಿಯಂ ನೈಟ್ರೇಟ್ ವಸ್ತುಗಳು ಗಾಳಿಯಲ್ಲಿ ಸ್ಫೋಟಗೊಂಡಿರುವ ಸಾಧ್ಯತೆಗಳಿವೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ತೀರ್ಮಾನಿಸಲಾಗಿದ್ದು, ತನಿಖಾ ವರದಿ ಬಂದ 24 ಗಂಟೆ ಒಳಗೆ ತಪ್ಪಿತಸ್ಥರನ್ನು ಶಿಕ್ಷಗೆ ಗುರಿಪಡಿಸಲಾಗುವುದು ಎಂದು ಹೇಳೀದರು.

ಹಾಗೆಯೇ ಮಾತು ಮುಂದುವರೆಸಿದ ಬೊಮ್ಮಯಿ, ಈ ಕ್ವಾರಿಯು ಶಿರಡಿ ಸಾಯಿ ಏಜೆನ್ಸಿ ಹೆಸರಿನಲ್ಲಿದ್ದು, ಮೂರು ಮಂದಿ ಪಾಲುದಾರರಿದ್ದಾರೆ. ಒಬ್ಬರು ಕರ್ನಾಟಕ ನಾಗರಾಜು ಮತ್ತು ಇಬ್ಬರು ಆಂಧ್ರ ಮೂಲದ ರೆಡ್ಡಿ ಎಂಬುವವರು. ಒಟ್ಟು ೩ ಏಕರೆಯಲ್ಲಿ ಕಲ್ಲು ಕ್ವಾರಿ ಮತ್ತು ೩ ಏಕರೆಯಲ್ಲಿ ಕ್ರಷರ್ ಇದೆ. ಈ ಕ್ವಾರಿಯ ಮೇಲೆ ಕೆಲ ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠ ಆಧಿಕಾರಿ ದಾಳಿ ನಡೆಸಿದ್ದರು. ಅದರ ಆಧಾರದ ಮೇಲೆ ಫೆಬ್ರವರಿ 7 ರಂದು ಪೊಲೀಸರು ದಾಳಿ ಮಾಡಿ ಕೆಲವು ವಾಹನಗಳನ್ನು ವಶಪಡಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಇಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ಬಚ್ಚಿಟ್ಟಿರಬಹುದು. ಆ ಸ್ಫೋಟಕಗಳು ನಮ್ಮ ಕ್ವಾರಿಯಲ್ಲಿ ಸಿಕ್ಕರೆ ದೊಡ್ಡ ಕೇಸ್ ಅಗಬಹುದು ಎಂಬ ಆತಂಕ ಅವರನ್ನು ಕಾಡುತ್ತಿರಬಹುದು. ಹೀಗಾಗಿ ರಾತ್ರೋ ರಾತ್ರಿ ಅಲ್ಲಿನ ಸ್ಫೋಟಕಗಳನ್ನು ತರಬೇತಿ ಇಲ್ಲದ ಕೆಲ ಯುವಕರು ಸ್ಥಳಾಂತರಿಸುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಒಂದು ಮೋಟರ್ ಸೈಕಲ್ ಮತ್ತು ನಾಲ್ಕು ಚಕ್ರದ ವಾಹನಗಳು ಖಜಂಗೊAಡಿವೆ ಎಂದು ಹೇಳಿದರು.

ಇದು ತುಂಬ ದೊಡ್ಡ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿದ್ದು, ಬಹಳ ನೋವಿನ ಸಂಗತಿ. ಘಟನೆಯಲ್ಲಿ ಬಲಿಯಾದ ಆರು ಕಾರ್ಮಿಕರ ದೇಹಗಳ ಪೈಕಿ ಎರಡು ದೇಹಗಳು ಛಿದ್ರ ಛಿದ್ರವಾಗಿವೆ. ದೇಹಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ನೋಡಿದರೆ ಕರುಳು ಕಿತ್ತು ಬರುತ್ತದೆ. ನಮ್ಮ ಕುಟುಂಬದವರಿಗೆ ಹೀಗಾದ್ರೆ ಹೇಗೆ ಎಂಬ ಯೋಚನೆ ಬರುತ್ತಿದೆ ಎಂದು ಗೃಹ ಸಚಿವ ಬಸವರಾಜು ಬೊಮ್ಮಯಿ ತಿಳಿಸಿದರು.

- Advertisement -

Latest Posts

Don't Miss