Sunday, December 22, 2024

Latest Posts

‘ಪೊಗರು’ ಪೋರನ ಹೊಸ ಲುಕ್….ಇದು ಧ್ರುವ ‘ದುಬಾರಿ’ ಗೆಟಪ್….?

- Advertisement -

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಪತ್ನಿ ಜೊತೆ ಜಾಲಿ ಟ್ರಿಪ್ ಮುಗಿಸಿ ಮುಂದಿನ ಸಿನಿಮಾ ದುಬಾರಿಗೆ ಸಖತ್ ಪ್ರಿಪರೇಷನ್ ನಡೆಸ್ತಿದ್ದಾರೆ. ಪೊಗರು ಸಿನಿಮಾದಲ್ಲಿ ಉದ್ದ ಕೂದಲು, ಗಡ್ಡ ಬಿಟ್ಟು ಖರಾಬು ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಧ್ರುವ ಚಿತ್ರೀಕರಣ ಕಂಪ್ಲೀಟ್ ಆಗ್ತಿದ್ದಂತೆ ಕೂದಲಿಗೆ ಕತ್ತರಿಸಿ ಹಾಕಿಸಿದ್ರು. ಇದೀಗ ಪೊಗರು ಪೋರ ಮತ್ತೊಂದು ಹೊಸ ಗೆಟಪ್ ನಲ್ಲಿ ಕ್ಯಾಮರಾಗೆ ಕಾಣಿಸಿಕೊಂಡಿದ್ದಾರೆ‌.

ಸಖತ್ ಸ್ಟೈಲೀಶ್ ಅಂಡ್ ಹ್ಯಾಂಡ್ ಸಮ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಧ್ರುವ ಸರ್ಜಾ ನ್ಯೂ ಗೆಟಪ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇತ್ತೀಚೆಗೆ ಧ್ರುವ ಆಂಜನೇಯ ದೇವಸ್ಥಾನದ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಕಾರ್ಯಕ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಇದು ದುಬಾರಿ ಸಿನಿಮಾದ ಲುಕ್ ಇರಬಹುದು ಅಂತಾ ಅಭಿಮಾನಿಗಳು ಗೆಸ್ ಮಾಡ್ತಿದ್ದಾರೆ.

- Advertisement -

Latest Posts

Don't Miss