Sunday, November 16, 2025

Latest Posts

ಲಡಾಖ್‌ನ ಉದ್ವಿಗ್ನತೆ ನಡುವೆ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಬಂಧನ !

- Advertisement -

ಲಡಾಖ್‌ನಲ್ಲಿ ನಡೆಯುತ್ತಿರುವ ಉದ್ವಿಗ್ನತೆ ನಡುವೆ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಲಾಗಿದೆ. ಜನರನ್ನು ಪ್ರಚೋದಿಸುವಂತ ಹೇಳಿಕೆಗಳನ್ನು ನೀಡಿದ್ದಾರೆ ಎನ್ನುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ವಿಶೇಷವೆಂದರೆ, ನನ್ನ ಹೇಳಿಕೆಗಳಿಂದ ಬಂಧಿಸಿದರೂ ನನಗೆ ಸಂತೋಷ ಎಂದು ಹೇಳಿದ ಒಂದು ದಿನದ ನಂತರವೇ ಅವರನ್ನು ಬಂಧಿಸಲಾಗಿದೆ.

2018ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ವಾಂಗ್‌ಚುಕ್, ಲಡಾಖ್ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದರು. ಇತ್ತೀಚೆಗೆ ಅವರ ಲಾಭರಹಿತ ಸಂಸ್ಥೆಯ FCRA ನೋಂದಣಿ ಗೃಹ ಸಚಿವಾಲಯದಿಂದ ರದ್ದು ಆಗಿತ್ತು. ವಿದೇಶಿ ನಿಧಿ ಪಡೆದಿದ್ದಾರೆ ಎನ್ನುವ ಆರೋಪದ ನಡುವೆ ಈ ಬಂಧನ ನಡೆದಿದೆ.

ಇತ್ತೀಚಿನ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿ, 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ವಾಂಗ್‌ಚುಕ್ ಎಲ್ಲಾ ಆರೋಪಗಳನ್ನು ಖಂಡಿಸಿ, ನಾವು ವಿದೇಶಿ ಕೊಡುಗೆ ಪಡೆದಿಲ್ಲ, ಕೇವಲ ವ್ಯವಹಾರ ವಹಿವಾಟು ಮಾಡಿದ್ದೇವೆ ಎಂದು ಹೇಳಿದ್ದಾರೆ. 2019ರಲ್ಲಿ ಕಲಂ 370 ರದ್ದಾದ ಬಳಿಕ ಲಡಾಖ್‌ನಲ್ಲಿ ಪ್ರಾರಂಭವಾದ ಹರ್ಷ ಈಗ ಅಸಮಾಧಾನಕ್ಕೆ ತಿರುಗಿದ್ದು, ರಾಜ್ಯ ಸ್ಥಾನಮಾನದ ಬೇಡಿಕೆಯ ನಡುವೆ ಬಂಧನ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss