ಮತ್ತೆ ಸಂಕಷ್ಟದಲ್ಲಿ ನಟ ಅನಿರುದ್ದ್ ಎಸ್. ನಾರಾಯಣ್ ಹೇಳಿದ್ದೇನು..?

ನಟ ಅನಿರುದ್ದ್ ಟೈಮ್ ಸರಿ ಇಲ್ವಾ, ಅನ್ನೋ ಪ್ರಶ್ನೆ ಯಾಕೋ ಜೋರಾಗಿ ಚರ್ಚೆ ಆಗುತ್ತಿದೆ. ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡು ತೆರೆಮರೆಯಲ್ಲಿದ್ದ .

ನಿಮಾಪಕ, ನಿರ್ದೇಶಕರಾದ ಎಸ್. ನಾರಾಯಣ್ ಅವರು ಅನಿರುದ್ದ್ ಅವರಿಗೆ ಹೊಸ ಧಾರವಾಹಿಗೆ ಅವಕಾಶ ನೀಡಿದ್ದರು. ಎಸ್ ನಾರಾಯಣ್ ಅನಿರುದ್ದ್ ಜೊತೆ ಸೂರ್ಯವಂಶ ಅನ್ನೋ ಸೀರಿಯಲ್ ಅನೌನ್ಸ್ ಮಾಡಿದ್ದರು. ಇದರ ಬೆನ್ನಲ್ಲೇ ಮತ್ತೆ ಅನಿರುದ್ದ್ ಅವರನ್ನು ಕಿರಿತೆರೆಯಿಂದ ಬ್ಯಾನ್ ಮಾಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅನಿರುದ್ದ್ ಅವರನ್ನ ಕಿರುತೆರಿಯಿಂದ ದೂರ ಇಡಬೇಕು. ಅವರಿಗೆ ಸೀರಿಯಲ್ ಗಳಲ್ಲಿ ಅವಕಾಶ ಕೊಡಬಾರದು ಅನ್ನೋ ಕೂಗು ಕೇಳಿಬರುತ್ತಿದೆ.

ಜೊತೆ ಜೊತೆಯಲ್ಲಿ ಧಾರಾವಾಹಿಯ ಶೂಟಿಂಗ್ ಸೆಟ್ ನಲ್ಲಿ ಅನಿರುದ್ದ್ ನಡವಳಿಕೆ ಅವರ ಕಿರುತೆರೆ ಜೀವನವನ್ನೇ ಅಂತ್ಯಗೊಳಿಸಲಿದೆಯೇ? ಅಥವಾ ಎಲ್ಲವೂ ಒಂದು ತಾರ್ಕಿಕ ಅಂತ್ಯ ಕಾಣಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.




