ನೌಕಾಪಡೆ ಅಧಿಕಾರಿಗಳ ಜೊತೆ ಫೋಟೋ ವೈರಲ್

ಭಾರತೀಯ ನೌಕಾಪಡೆಯ ಅಧಿಕಾರಿಗಳು ಜೊತೆ ನಿಂತಿರುವ ಫೋಟೋ ಮತ್ತು ಕಾಲೇಜ್ ದಿನಗಳಲ್ಲಿ ಕ್ಲಿಕ್ ಮಾಡಿಕೊಂಡ ಫೋಟೋವನ್ನು ಹಂಚಿಕೊಂಡ ಚಿರಂಜೀವಿ ‘ಗೋವಾ ವಿಮಾನ ನಿಲ್ದಾಣದಲ್ಲಿ ಒಂದು ದೊಡ್ಡ ಗುಂಪಿನ ಭಾರತೀಯ ನೌಕಾಪಡೆಯ ಅಧಿಕಾರಿಗಳು ಫೋಟೋ ಕ್ಲಿಕ್ ಮಾಡಿಕೊಳ್ಳಲು ನನ್ನನ್ನು ಕೇಳಿದ್ದರು ಆಗ ಅತಿ ಹೆಚ್ಚು ಸಂತೋಷದಿಂದ ನಾನು ಅವರ ಗುಂಪು ಸೇರಿಕೊಂಡೆ.ಆ ಕ್ಷಣ ನಾನು ನಾನು ಎನ್.ಸಿ.ಸಿ. ಗೆ ಸೇರ್ಪಡೆಗೊಂಡಾಗ….ನೇವಲ್ ಕೆಡೆಟ್ ದಿನಗಳು ನೆನಪಿಗೆ ಬಂತು’ ಎಂದು ಚಿರಂಜೀವಿ ಟ್ವೀಟ್ ಮಾಡಿದ್ದರು.
53ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಇಂಡಿಯನ್ ಫಿಲ್ಮ ಪರ್ಸನಾಲಿಟಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಇದರ ಬೆನ್ನಲೆ ಗೋವಾದಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿಗಳ ಜೊತೆ ಕ್ಲಿಕ್ ಮಾಡಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.
ಪ್ರಶಸ್ತಿ ಸ್ವೀಕರಿಸಿದ ಚಿರಂಜೀವಿ ಎಂದೂ ಜೀವನದಲ್ಲಿ ತೆಲುಗು ಸಿನಿಮಾ ಅಭಿಮಾನಿಗಳ ಪ್ರೀತಿಯನ್ನು ಮರೆಯುವುದಿಲ್ಲ ಎಂದು ಹೇಳಿದ್ದರು. ಇಂತ ಅದ್ಭುತ ಅವಾರ್ಡ್ ಕೊಟ್ಟಿರುವುದಕ್ಕೆ IFFI ಮತ್ತು ಭಾರತ ಸರ್ಕಾರಕ್ಕೆ ನನ್ನ ಅಭಿನಂದನೆಗಳನ್ನು ತಿಳಿಸುತ್ತೇನೆ. ಕೆಲವೊಂದು ಪ್ರಶಸ್ತಿಗಳು ತುಂಬಾನೇ ಸ್ಪೆಷಲ್ ಆಗಿರುತ್ತದೆ ಆ ಸಾಲಿಗೆ ಈ ನನ್ನ ಪ್ರಶಸ್ತಿ ಸೇರಲಿದೆ. ಮಿಡಲ್ ಕ್ಲಾಸ್ ಮನೆಯಲ್ಲಿ ಸ್ವಾಭಿಮಾನಿ ಪೋಷಕರಿಗೆ ಹುಟ್ಟಿದ್ದವನ್ನು ನಾನು. ನನ್ನ ಫೇಮ್, ಹೆಸರು, ಚರಿಸ್ಮಾ, ಸವಲತ್ತುಗಳು, ನನ್ನ ಅಭಿಮಾನಿಗಳ ಅಮೂಲ್ಯ ಪ್ರೀತಿ ಮತ್ತು ವಾತ್ಸಲ್ಯ ಮತ್ತು ಎಲ್ಲವೂ ಚಿತ್ರರಂಗದಿಂದ ಬಂದಿರುವುದು.
53ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಇಂಡಿಯನ್ ಫಿಲ್ಮ ಪರ್ಸನಾಲಿಟಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.




