Wednesday, November 13, 2024

Latest Posts

ಟ್ರಾಲ್ ಗಳಿಗೆಲ್ಲಾ ಡಿ-ಬಾಸ್ ಡೋಂಟ್ ಕೇರ್, ನೀರಿನ ಸಮಸ್ಯೆ ನೀಗಿಸ್ತಿದ್ದಾರೆ ರಾಕಿಂಗ್ ಸ್ಟಾರ್..!

- Advertisement -

ಚುನಾವಣೆ ವೇಳೆ ನಿಖಿಲ್ ಎಲ್ಲಿದ್ದೀಯಪ್ಪಾ ಅಂತಿದ್ದವರೆಲ್ಲಾ ಇದೀಗ ದರ್ಶನ್ , ಯಶ್ ಎಲ್ಲಿದ್ದೀರಪ್ಪ ಅಂತ ವ್ಯಂಗ್ಯ ಮಾಡ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಸಾಕಷ್ಟ ಬಾರಿ ಭೇಟಿ ನೀಡಿದ್ದ ನಟರು ಇದೀಗ ಮಂಡ್ಯದತ್ತ ಮುಖ ಮಾಡದೇ ಇರೋ ಕಾರಣಕ್ಕೆ ಜೆಡಿಎಸ್ ಕಾರ್ಯಕರ್ತರು ಟ್ರಾಲ್ ಮಾಡ್ತಿದ್ದಾರೆ. ಆದ್ರೆ ರಾಕಿ ಭಾಯ್ ಮತ್ತು ದಚ್ಚು ಮಾತ್ರ ಇದಕ್ಕೆ ತಲೆ ಕೆಡಿಸಿಕೊಳ್ಳದೇ ಸೈಲೆಂಟ್ ಆಗಿ ತಮ್ಮ ಕೆಲಸವನ್ನ ಅಚ್ಚುಕಟ್ಟಾಗಿ ನಿಭಾಯಿಸ್ತಿದ್ದಾರೆ.

ಮಳೆಯಿಲ್ಲದೇ ಕುಡಿಯುವ ನೀರಿನ ಸಮಸ್ಯೆಯಿಂದ ಕಂಗಾಲಾಗಿರುವ ಜನರಿಗೆ ಯಶ್ ತಮ್ಮ ಯಶೋಮಾರ್ಗ ಫೌಂಡೇಷನ್ ಮೂಲಕ ನೀರು ಪೂರೈಕೆ ಮಾಡ್ತಿದ್ದಾರೆ. ಬೀದರ್, ಬಾಗಲಕೋಟೆ, ಚಿಕ್ಕಬಳ್ಳಾಪುರದಲ್ಲೂ ಯಶೋಮಾರ್ಗ ಹೆಸರಿನಲ್ಲಿ ನೂರಾರು ಜನ ಜನರ ನೀರಿನ ಸಮಸ್ಯೆ ನೀಗಿಸಲು ಮುಂದಾಗಿದ್ದಾರೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಸದ್ದಿಲ್ಲದೇ ತಮ್ಮ ಪರೋಪಕಾರಿ ಕೆಲಸ ಮಾಡ್ತಿದ್ದಾರೆ. ಸುಮಲತಾ ಅವರನ್ನ ಗೆಲ್ಲಿಸಿದ್ರೆ ಸಂಸದರ ನಿಧಿಯನ್ನ ಒಂದು ರೂಪಾಯಿ ಪೋಲಾಗದಂತೆ ಜನರ ಸೇವೆಗೆ ಬಳಸ್ತೇವೆ ಅಂತ ಮಾತು ಕೊಟ್ಟಿದ್ರು. ಅಷ್ಟೇ ಅಲ್ಲದೆ ಮಂಡ್ಯದಲ್ಲಿ ಕಳೆದ ಏಪ್ರಿಲ್ 17ರಂದು ಮಾತನಾಡಿದ್ದ ದರ್ಶನ್ ನಾನು ವರ್ಷಕ್ಕೆ 2 ಕೋಟಿ ಹಣವನ್ನ ಕಷ್ಟ ಅಂತ ಬಂದವರ ಸಹಾಯಕ್ಕೆ ಅಂತ ಬಳಸುತ್ತಿದ್ದೇನೆ ಎಂದಿದ್ದರು. ಅಂತೆಯೇ ಮಂಡ್ಯದಲ್ಲಿ ಅಪಘಾತಕ್ಕೀಡಾಗಿದ್ದ ಓರ್ವ ಯುವಕನಿಗೆ 1ಲಕ್ಷ ದನ ಸಹಾಯ ಮಾಡಿದ್ದಾರೆ. ಹಲವು ಕ್ರೀಡಾಪಟುಗಳಿಗೆ ಹಣಕಾಸಿನ ನೆರವು ನೀಡಿದ್ದಾರೆ.

ಈ ಮೂಲಕ ಎಲ್ಲಿದ್ದೀಯಪ್ಪಾ ಯಶ್, ದರ್ಶನ್ ಎನ್ನುತ್ತಿರುವವರಿಗೆಲ್ಲಾ ಯಶ್ ಹಾಗೂ ಡಿ ಬಾಸ್ ತಮ್ಮ ಕೆಲಸದ ಮೂಲಕವೇ ಉತ್ತರ ನೀಡುತ್ತಿದ್ದಾರೆ.

ಕನ್ನಡದಲ್ಲಿ ಯಜಮಾನನೇ ನಂ.1?? ಮಿಸ್ ಮಾಡದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss