ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಡೆಯಿಂದ ಹೊಸ ವರ್ಷಕ್ಕೆ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ತಿದೆ. ಗಾಂಧಿನಗರದಲ್ಲಿ ಅಬ್ಬರಿ, ಬೊಬ್ಬಿರಿದ ಪೊಗರು ಸಿನಿಮಾದ ಟೀಸರ್ ಇದೀಗ ತೆಲುಗಿ ನೆಲದಲ್ಲೂ ಹವಾ ಸೃಷ್ಟಿಸಲು ರೆಡಿಯಾಗಿದೆ. ಹೊಸ ವರ್ಷದ ಪ್ರಯುಕ್ತ ಪೊಗರು ಸಿನಿಮಾದ ತೆಲುಗು ಟೀಸರ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ. ಈಗಾಗ್ಲೇ ತಮಿಳಿನಲ್ಲಿಯೂ ಸೆಮ್ಮಾ ತಿಮಿರ್ ಹೆಸರಿನಲ್ಲಿ ರಿಲೀಸ್ ಆಗಿರುವ ಟೈಟಲ್ ಪೋಸ್ಟರ್ ಸಖತ್ ಸದ್ದು ಮಾಡ್ತಿದ್ದು, ತೆಲುಗಿನಲ್ಲೂ ರಿಲೀಸ್ ಆಗಲಿರುವ ಪೊಗರು ಟೀಸರ್ ಧೂಳ್ ಎಬ್ಬಿಸೋದ್ರಲ್ಲಿ ಅಚ್ಚರಿಯಲ್ಲಿ. ಯಾಕಂದ್ರೆ ಟಾಲಿವುಡ್ ಇಂಡಸ್ಟ್ರೀಯಲ್ಲಿ ರಶ್ಮಿಕಾಗೆ ದೊಡ್ಡ ಅಭಿಮಾನಿ ಬಳಗವಿದೆ. ಹೀಗಾಗಿ ತೆಲುಗು ನೆಲದಲ್ಲಿ ಪೊಗರು ಕ್ಲಿಕ್ ಆಗೋದು ಪಕ್ಕ ಎನ್ನಲಾಗ್ತಿದೆ.
ಈಗಾಗ್ಲೇ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿರುವ ಪೊಗರು ಚಿತ್ರದ ಖರಾಬು ಹಾಡು ಸಖತ್ ಸೌಂಡ್ ಮಾಡಿದ್ದು, ಕೋಟಿ-ಕೋಟಿ ವೀವ್ಸ್ ಪಡೆದುಕೊಂಡಿದೆ. ಇನ್ನೂ ಸಿನಿಮಾಕ್ಕೆ ನಂದಕಿಶೋರ್ ಆ್ಯಕ್ಷನ್ ಕಟ್ ಹೇಳಿದ್ದು, ಧ್ರುವ ಸರ್ಜಾಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಪೊಗರು ಸಿನಿಮಾ ಬೆಳ್ಳಿಪರದೆಯ ಮೇಲೆ ರಾರಾಜಿಸಲಿದೆ ಎನ್ನಲಾಗ್ತಿದೆ. ಬಟ್ ಈ ಬಗ್ಗೆ ಸಿನಿಮಾ ತಂಡ ಯಾವುದೇ ಅಪ್ ಡೇಟ್ ನೀಡಿಲ್ಲ.