ಬೆಳ್ಳಿಪರದೆಯ ಮೇಲೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರಿಸಂ ತೋರಿಸೋದಿಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಫೆಬ್ರವರಿ 19ರಂದು ದೊಡ್ಡಪರದೆಯ ಮೇಲೆ ರಾರಾಜಿಸಲಿರುವ ಪೊಗರು ಸಿನಿಮಾದ ಬಗ್ಗೆ ಮಾಹಿತಿ ನೀಡಲು ಇಂದು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಸಿನಿಮಾ ನಿರ್ಮಾಪಕ ಬಿ.ಕೆ.ಗಂಗಾಧರ್, ನಟ ಧ್ರುವ ಸರ್ಜಾ, ನಿರ್ದೇಶಕ ನಂದ ಕಿಶೋರ್, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಕನ್ನಡ ಚಿತ್ರರಂಗದ ಹಲವು ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಕೂಡ ಉಪಸ್ಥಿತರಿದ್ದರು.
ಸಿನಿಮಾ ಬಗ್ಗೆ ಹಲವು ಇಂಟ್ರೆಸ್ಟಿಂಗ್ ವಿಷ್ಯಗಳನ್ನು ಹಂಚಿಕೊಂಡು ಧ್ರುವ ಸರ್ಜಾ, ಕೊನೆಯ ಕ್ಷಣದಲ್ಲಿ ಪ್ರೀತಿಯ ಅಣ್ಣ ಚಿರು ನೆನೆದು ಭಾವುಕರಾದ್ರು. ಈ ವೇಳೆ ಅಣ್ಣನ ಬಗ್ಗೆ ಧ್ರುವ ಹೇಳಿದ್ದು ಎಲ್ಲರಲ್ಲಿ ಕಣ್ಣಂಚಲಿ ನೀರು ತರಿಸುವಂತಿತ್ತು.

ಈ ಸಂದರ್ಭದಲ್ಲಿ ನಾನು ಇಬ್ಬರನ್ನು ನೆನಪಿಸಿಕೊಳ್ಳುತ್ತೇನೆ. ಒಬ್ರು ನನ್ನ ಅಂಕಲ್ ಅರ್ಜುನ್ ಸರ್ಜಾ, ಇನ್ನೊಬ್ಬ ನಮ್ಮ ಅಣ್ಣ. ಈ ಸಿನಿಮಾ ಶೂಟಿಂಗ್ ವೇಳೆ ಅಣ್ಣ ಜೊತೆಗಿರ್ತಿದ್ದ. ನಾನು ಸಿನಿಮಾ ನೋಡ್ತೀನಿ ಬಾ ಅಂತ ಹೇಳ್ಬಿಟ್ಟು ಎಡಿಟಿಂಗ್ ನಲ್ಲಿ ಸಿನಿಮಾ ನೋಡಿದ್ದ. ನೋಡ್ತಾನೆ ಬಹಳ ಕರೆಕ್ಷನ್ ಮಾಡಿದ್ದ. ಹಾಗಲ್ಲ ಹೀಗೆ ಮಾಡು ಅಂತೆಲ್ಲ ಒಂದಷ್ಟು ಬದಲಾವಣೆ ಮಾಡಿದ್ದ. ನಿಜ ಹೇಳ್ತೀನಿ. ನಾನು ಪ್ರತಿ ಸಿನಿಮಾವನ್ನು ಫಸ್ಟ್ ಡೇ , ಫಸ್ಟ್ ಶೋ ನಮ್ಮ ಅಣ್ಣನ ಜೊತೆ ನೋಡ್ತಿದ್ದೆ. ಅವನನ್ನು ಬಜಳ ಮಿಸ್ ಮಾಡಿಕೊಳ್ತೀನಿ. ಅಲ್ಲದೇ ಈ ಸಿನಿಮಾವನ್ನು ನಾನು ನಮ್ಮ ಅಣ್ಣನಿಗೆ ಡೆಡಿಕೇಟ್ ಮಾಡ್ತಾ ಇದ್ದೀನಿ.
ಧ್ರುವ ಸರ್ಜಾ, ನಟ