ಬೆಂಗಳೂರು: ಸ್ಯಾಂಡಲ್ ವುಡ್ ನಟ ಯಶ್ ನಟನೆಯ ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ರಾಕಿ ಭಾಯ್ ಜೊತೆಗೆ ಚಾಚಾ ಎಂಬುದಾಗಿ ನಟಿಸಿದ್ದಂತ ನಟ ಹರೀಶ್ ರೈಗೆ ಕ್ಯಾನ್ಸರ್ ಎಂಬುದಾಗಿ ತಿಳಿದು ಬಂದಿದೆ. ಅಲ್ಲದೇ ಅವರ ಸ್ಥಿತಿ ಈಗ ಗಂಭೀರಗೊಂಡಿರೋದಾಗಿ ಹೇಳಲಾಗುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡಿದ್ದಂತ ಚಿತ್ರ ಕೆಜಿಎಫ್-2ನಲ್ಲಿ ರಾಕಿ ಭಾಯ್ ಜೊತೆಗೆ ಚಾಚಾ ಎಂಬುದಾಗಿ ನಟ ಹರೀಶ್ ರೈ ನಟಿಸಿದ್ದರು. ಅವರೀಗೆ ಈಗ ಕ್ಯಾನ್ಸರ್ ಎಂಬುದಾಗಿ ಹೇಳಲಾಗುತ್ತಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಂತ ಅವರ ಸ್ಥಿತಿ, ಈಗ ಗಂಭೀರಗೊಂಡಿದೆ ಎನ್ನಲಾಗಿದೆ.
ಅಂದಹಾಗೇ ನಟ ಹರೀಶ್ ರೈ ಅವರಿಗೆ 1995ರಲ್ಲಿ ಬಿಡುಗಡೆಯಾದಂತ ಓಂ ಚಿತ್ರ ತುಂಬಾನೇ ಹೆಸರು ತಂದುಕೊಟ್ಟಿತ್ತು. ಈ ಬಳಿಕ 1997ರಲ್ಲಿ ತಾಯವ್ವ, ಜೋಡಿ ಹಕ್ಕಿ, 2004ರಲ್ಲಿ ನಲ್ಲ, 2006ರಲ್ಲಿ ನನ್ನ ಕನಸಿನ ಹೂವೆ, 2011ರ ಸಂಜು ವೆಡ್ಸ್ ಗೀತಾ ಸೇರಿದಂತೆ ವಿವಿಧ ಚಿತ್ರಗಳಲ್ಲಿ ನಟಿಸಿದ್ದಾರೆ.

