Sunday, April 13, 2025

Latest Posts

ಜಗ್ಗೇಶ್ ಆಪ್ತ ಹಾಸ್ಯ ನಟ ಗಂಡಸಿ ನಾಗರಾಜ್ ಇನ್ನಿಲ್ಲ

- Advertisement -

ಜಗ್ಗೇಶ್ ಆಪ್ತ ಹಾಸ್ಯ ನಟ ಗಂಡಸಿ ನಾಗರಾಜ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ವಸ್ತ್ರ ವಿನ್ಯಾಸಕ, ಹಾಸ್ಯ ನಟ ಗಂಡಸಿ ನಾಗರಾಜ್ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಳೆದ 40 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಗಂಡಸಿ ನಾಗರಾಜ್, ನೂರಾರು ಸಿನಿಮಾಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದರು.
ಆರೋಗ್ಯ ಸಮಸ್ಯೆಯಿಂದಾಗಿ ಅವರು ಸಿನಿಮಾರಂಗದಲ್ಲಿ ಅಷ್ಟೇನೂ ಸಕ್ರಿಯವಾಗಿರಲಿಲ್ಲ. ಅವರ ಕಿಡ್ನಿ ಫೇಲ್ ಆಗಿದ್ದವು. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಚಿಕಿತ್ಸೆ ಫಲಕಾರಿ ಆಗದೇ ಪದ್ಮನಾಭನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಗಂಡಸಿ ನಾಗರಾಜ್ ಅವರ ಪತ್ನಿ ಹೃದಯಾಘಾತದಿಂದ ನಿಧನರಾಗಿದ್ದರು.
ನವರಸ ನಾಯಕ’ ಜಗ್ಗೇಶ್ ಅವರಿಗೆ ಗಂಡಸಿ ನಾಗರಾಜ್ ಅವರು ತುಂಬ ಆಪ್ತರಾಗಿದ್ದರು. ಜಗ್ಗೇಶ್ ಅವರ ಅನೇಕ ಸಿನಿಮಾಗಳಲ್ಲಿ ಗಂಡಸಿ ನಾಗರಾಜ್ ನಟಿಸಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ಅವರು ಹೆಚ್ಚು ಕಾಣಿಸಿಕೊಂಡಿದ್ದರು. ಜಗ್ಗೇಶ್ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದರಾಗಿದ್ದರು

- Advertisement -

Latest Posts

Don't Miss