- Advertisement -
ಜಗ್ಗೇಶ್ ವರ್ಸಸ್ ಜಗ್ಗುದಾದಾ ದರ್ಶನ್ ಫ್ಯಾನ್ಸ್ ಕಿತ್ತಾಟ ಕೊನೆಗೂ ದಿ ಎಂಡ್ ಸಿಕ್ಕಿದೆ. ದರ್ಶನ್ ತಮ್ಮ ನೆಚ್ಚಿನ ಸೆಲೆಬ್ರಿಟಿಗಳು ಅಂದ್ರೆ ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ನವರಸ ನಾಯಕ ಜಗ್ಗೇಶ್ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ಸಮಯ ಸಂದರ್ಭ ವಿಷಘಳಿಗೆ.. ಪ್ರೀತಿ ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯೆ..! ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ..! ಕನ್ನಡಕ್ಕೆ ಒಗ್ಗಟ್ಟಿರಲಿ! ಧನ್ಯವಾದ ದರ್ಶನ್. ಮನಸ್ಸು ಹಗುರವಾಯಿತು. ಧನ್ಯವಾದ ಮಾಧ್ಯಮಮಿತ್ರರಿಗೆ. ಧನ್ಯವಾದ ಕನ್ನಡದ ಮನಗಳಿಗೆ. ಇನ್ನೆಂದು ಇಂಥ ದಿನ ಬರದಿರಲಿ ಎಂದು ಹೇಳಿದ್ದಾರೆ.
- Advertisement -