ಹಲ್ಲೆಗೊಳಗಾಗಿದ್ದ ವ್ಯಕ್ತಿಯ ಕ್ಷಮೆ ಕೇಳಿದ ನಟ ಜೈಜಗದೀಶ್: ಪ್ರಕರಣ ಸುಖಾಂತ್ಯ

ಮಂಡ್ಯ: ಜಿಲ್ಲೆಯ ಬೆಳ್ಳೂರು ಠಾಣೆಯಲ್ಲಿ ನಟ ಜೈಗದೀಶ್ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ವ್ಯಕ್ತಿಯೊಬ್ಬರು ದಾಖಲಿಸಿದ್ದಂತ ಪ್ರಕರಣ ಸಂಬಂಧ, ಇಂದು ವ್ಯಕ್ತಿ ಹಾಗೂ ನಟ ಜೈಜಗದೀಶ್ ನಡುವೆ ಸಂಧಾನ ನಡೆದಿದೆ. ಈ ಹಿನ್ನಲೆಯಲ್ಲಿ ಹಲ್ಲೆ ಪ್ರಕರಣ ಈಗ ಸುಖಾಂತ್ಯಗೊಂಡಿದೆ.

ನಟ ಜೈಜಗದೀಶ್ ಅವರು ತಮ್ಮ ಕಾರಿನಲ್ಲಿ ತೆರಳುತ್ತಿದ್ದಂತ ಸಂದರ್ಭದಲ್ಲಿ ಬಸ್ ನಲ್ಲಿ ತೆರಳುತ್ತಿದ್ದಂತ ಜಯರಾಮೇಗೌಡ ಎಂಬುವರು ಬಸ್ ಕಿಟಕಿಯಿಂದ ಬಾಟಲ್ ಹೊರ ಎಸೆದಿದ್ದರು. ಆ ಬಾಟಲ್ ನಟ ಜೈಜಗದೀಶ್ ಅವರ ಕಾರಿನ ಮೇಲೆ ಬಿಗ್ಗು, ಜೂನ್.5ರಂದು ಗಲಾಟೆಯಾಗಿತ್ತು.

ಈ ವೇಳೆ ನಟ ಜೈಜಗದೀಶ್ ಬಸ್ಸಿನಿಂದ ಜಯರಾಮೇಗೌಡ ಅವರನ್ನು ಇಳಿಸಿ, ಕೆಟ್ಟದಾಗಿ ಬೈದಿದ್ದಲ್ಲದೇ ಹಲ್ಲೆ ಕೂಡ ನಡೆಸಿದ್ದರು ಎನ್ನಲಾಗಿದೆ. ಈ ಕಾರಣದಿಂದಾಗಿ ಜಯರಾಮೇಗೌಡ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸ್ ಠಾಣೆಗೆ ತೆರಳಿ, ತಮ್ಮನ್ನು ನಿಂದಿಸಿ, ಹಲ್ಲೆ ನಡೆಸಿದಂತ ಜೈಜಗದೀಶ್ ವಿರುದ್ಧ ದೂರು ನೀಡಿದ್ದರು.

ಇಂದು ನಟ ಜೈಜಗದೀಶ್ ಬೆಳ್ಳೂರು ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಪೊಲೀಸರು ಹಲ್ಲೆಗೊಳಗಾದಂತ ಜಯರಾಮೇಗೌಡ ಹಾಗೂ ನಟ ಜೈಜಗದೀಶ್ ನಡುವೆ ರಾಜಿ ಸಂಧಾನ ಮಾಡಿಸುವಲ್ಲಿ ಯಶಸ್ವಿಯಾದ್ರು. ಇದೇ ವೇಳೆಯಲ್ಲಿ ಹಲ್ಲೆಗೆ ಒಳಗಾಗಿದ್ದಂತ ಜಯರಾಮೇಗೌಡ ಅವರನ್ನು ನಟ ಜೈಜಗದೀಶ್ ಕ್ಷಮೆಯಾಚಿರಿದ್ರು ಎನ್ನಲಾಗಿದೆ. ಅಲ್ಲದೇ ಕ್ಷಮಾಪಣಾ ಪತ್ರ ಕೂಡ ಬರೆದುಕೊಟ್ಟ ಕಾರಣ, ಈಗ ನಟ ಜೈಜಗದೀಶ್ ಹಲ್ಲೆ ಪ್ರಕರಣ ಸುಖಾಂತ್ಯ ಕಂಡಿದೆ.

About The Author