Thursday, December 12, 2024

Latest Posts

ಮತ್ತೆ ಒಂದಾದ ಮುಕುಂದ-ಮುರಾರಿ ಜೋಡಿ…! ಉಪ್ಪಿಯ ಕಬ್ಜ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್..!

- Advertisement -

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್.ಚಂದ್ರು ಕಾಂಬಿನೇಷನ್ ನ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ಕಬ್ಜ. ಈಗಾಗ್ಲೇ ರಿಲೀಸ್ ಆಗಿರೋ ಪೋಸ್ಟರ್ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡ್ತಿರೋ ಕಬ್ಜ ಏಳು ಭಾಷೆಯಲ್ಲಿ ತೆರೆಗೆ ಬರಲು ರೆಡಿಯಾಗ್ತಿದೆ. ಈ ನಡುವೆಯೇ ಸಂಕ್ರಾಂತಿ ಹಬ್ಬಕ್ಕೆ ಉಪ್ಪಿ ಅಭಿಮಾನಿಗಳಿಗೆ ಸರ್ ಪ್ರೈಸ್ ಗಿಫ್ಟ್ ಕೊಡೋದಿಕ್ಕೆ ನಿರ್ದೇಶಕ ಆರ್.ಚಂದ್ರು ಪ್ಲಾನ್ ಮಾಡ್ಕೊಂಡಿದ್ದಾರೆ. ನಾಳೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಬ್ಜ ಚಿತ್ರದ ಮತ್ತೊಂದು ಪಾತ್ರದ ಬಗ್ಗೆ ಚಿತ್ರತಂಡ ರಿವೀಲ್ ಮಾಡಲಿದೆ. ಆ ಸೀಕ್ರೆಟ್ ಪಾತ್ರದ ಬಗ್ಗೆ ಈಗ ಎಲ್ಲೆಡೆ ವೈರಲ್ ಆಗಿದೆ. ಅಷ್ಟಕ್ಕೂ ಕಬ್ಜದಲ್ಲಿ ಮಿಂಚಲಿರೋ ಮತ್ತೊಬ್ಬ ಸ್ಟಾರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.

ಮುಕುಂದ-ಮುರಾರಿ ಸಿನಿಮಾದಲ್ಲಿ ಮ್ಯಾಜಿಕ್ ಮಾಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಮತ್ತೆ ಒಂದಾಗ್ತಿದ್ದಾರೆ. ನಿರ್ದೇಶಕ ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಮುಕುಂದ-ಮುರಾರಿ ಸಿನಿಮಾದ ನಂತ್ರ ಕಬ್ಜ ಸಿನಿಮಾದಲ್ಲಿ ಕಿಚ್ಚ-ಉಪ್ಪಿ ಒಟ್ಟಿಗೆ ನಟಿಸಲಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಇದು ಕಿಚ್ಚನ ಮೊದಲ ರೆಟ್ರೋ ಸಿನಿಮಾ.

ಕನ್ನಡ, ತೆಲುಗು, ತಮಿಳು, ಹಿಂದಿ, ಮಾಲಯಾಳಂ, ಮರಾಠಿ ಸೇರಿದಂತೆ ಬೆಂಗಾಲಿ ಭಾಷೆಯಲ್ಲಿ ರೆಡಿಯಾಗ್ತಿರೋ ಕಬ್ಜ ಸಿನಿಮಾಕ್ಕೆ ಇನ್ನೂ ನಾಯಕಿ ಯಾರು ಅನ್ನೋದು ಅನೌನ್ಸ್ ಆಗಿಲ್ಲ, ಮೇಬಿ ನಾಳೆ ರಿಲೀಸ್ ಆಗಲಿರೋ ಆ ಸ್ಪೆಷಲ್ ಪಾತ್ರ ನಾಯಕಿ ಬಗ್ಗೆಯೋ ಇಲ್ಲ ಕಿಚ್ಚ ಸುದೀಪ್ ಬಗ್ಗೆಯೋ ಗೊತ್ತಿಲ್ಲ. ಬಟ್ ಸಂಕ್ರಾಂತಿ ಹಬ್ಬಕ್ಕೆ ರಿಯಲ್ ಸ್ಟಾರ್ ಫ್ಯಾನ್ಸ್ ಗೆ ಆರ್.ಚಂದ್ರು ಸಿಹಿಸುದ್ದಿ ಕೊಡೋದು ಪಕ್ಕಾ.

- Advertisement -

Latest Posts

Don't Miss