ಬೆಂಗಳೂರು: ನಟ ಕಿಚ್ಚ ಸುದೀಪ್ ಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದ್ರೇ ಕೊರೋನಾ ಅಲ್ಲ, ಕೇವಲ ವೈರಲ್ ಫೀವರ್ ಎಂಬುದಾಗಿ ಸುದೀಪ್ ಆಪ್ತ ಹಾಗೂ ನಿರ್ಮಾಪಕ ಜಾಕ್ ಮಂಜು ಸ್ಪಷ್ಟ ಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ನಟ ಕಿಚ್ಚ ಸುದೀಪ್’ಗೆ ಕೊರೋನಾ ಎಂಬ ವದಂತಿ ಬಗ್ಗೆ ಮಾಹಿತಿ ನೀಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ನಟ ಕಿಚ್ಚ ಸುದೀಪ್ ಗೆ ಹರಿದಾಡ್ತಿರೋ ಕೊರೋನಾ ಎಂಬ ಸುದ್ದಿ ಸುಳ್ಳು. ವಿಕ್ರಾಂತ್ ರೋಣ ಪ್ರಚಾರ ಕಾರ್ಯಗಳಿಂದ ವೈರಲ್ ಫೀವರ್ ಆಗಿದೆ ಎಂಬುದಾಗಿ ಹೇಳಿದ್ದಾರೆ.
ವೈರಲ್ ಫೀವರ್ ಕಾರಣದಿಂದಾಗಿ ಇಂದು ನಾಳೆ ವಿಶ್ರಾಂತಿ ಪಡೆದು ಶುಕ್ರವಾರದಿಂದ ಪ್ರೊಮೋಷನ್ಸ್ ಮಾಡಲಿದ್ದಾರೆ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದ ಸುದೀಪ್ ಆಪ್ತ ಜಾಕ್ ಮಂಜು ತಿಳಿಸಿದ್ದಾರೆ.




