ಹುಟ್ಟುಹಬ್ಬದ ಸಂಭ್ರಮದಲ್ಲಿ ಜಾಗ್ವರ್ ಹೀರೋ ನಿಖಿಲ್ ಕುಮಾರ್..ಪತ್ನಿಯೊಂದಿಗೆ ನಿಖಿಲ್ ಮೊದಲ ಬರ್ತ್ ಡೇ ಹೇಗಿತ್ತು..?

ಕನ್ನಡ ಚಿತ್ರರಂಗದ ಜಾಗ್ವರ್ ಹೀರೋ, ಸ್ಟೈಲೀಶ್ ಸ್ಟಾರ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಟ ನಿಖಿಲ್ ಕುಮಾರ್ ಗಿಂದು ಹುಟ್ಟುಹಬ್ಬದ ಸಂಭ್ರಮ. ಇಂದು ಬೆಳಗ್ಗೆಯೇ ಬೆಂಗಳೂರಿನ ಜೆಪಿನಗರದ ನಿವಾಸದಲ್ಲಿ ದೇವರಿಗೆ ವಿಶೇಷ ಪೂಜೆ ಮಾಡಿ ತಂದೆ-ತಾಯಿಯ ಆರ್ಶೀವಾದ ಪಡೆದುಕೊಂಡರು.

ಬಳಿಕ ಇಡೀ ಕುಟುಂಬದೊಂದಿಗೆ ಯುವರಾಜ ನಿಖಿಲ್ ಕೇಕ್ ಕತ್ತರಿಸಿ ಸಂಭ್ರಮಪಟ್ಟರು. ವಿಶೇಷ ಅಂದ್ರೆ ಈ ವರ್ಷ ಪತ್ನಿ ರೇವತಿ ಜೊತೆಗೆ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ತಿರೋ ನಿಖಿಲ್, ಪತ್ನಿ ಜೊತೆಯಲ್ಲಿರುವುದು ಹುಟ್ಟುಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.

ಸದ್ಯ ರಾಜಕೀಯ ಹಾಗೂ ಸಿನಿಮಾ ಎರಡರಲ್ಲೂ ಬ್ಯೂಸಿಯಾಗಿರುವ ನಿಖಿಲ್, ಹುಟ್ಟುಹಬ್ಬದ ಸ್ಪೆಷಲ್ ಆಗಿ ಅವರು ನಟಿಸ್ತಿರುವ ರೈಡರ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಖತ್ ಸೌಂಡ್ ಮಾಡ್ತಿದೆ.

ಅಲ್ಲದೇ ಅಭಿಮಾನಿಗಳು ನಿಖಿಲ್ ನಿವಾಸಕ್ಕೆ ಆಗಮಿಸಿ ನೆಚ್ಚಿನ ಸ್ಟಾರ್ ಬರ್ತ್ ಡೇಗೆ ಶುಭ ಕೋರುತ್ತಿದ್ದಾರೆ.

About The Author