ತಮ್ಮ ಮೇಲೆ ಎಫ್ಐಆರ್ ಹಾಕಿರುವುದನ್ನು ಪ್ರಶ್ನಿಸಿ ಪೃಥ್ವಿರಾಜ್ ಸುಕುಮಾರನ್ ಅವರು ಕೇರಳ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆದಿದ್ದು ಗುರುವಾರ ತೀರ್ಪು ಪ್ರಕಟ ಆಗಿದೆ. ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾಗೆ ಸಿಕ್ಕಂತಹ ಜನಸ್ಪಂದನೆ ತುಂಬ ದೊಡ್ಡದು. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಅನೇಕ ದಾಖಲೆಗಳನ್ನು ಬರೆಯಿತು. ಅದರ ಜೊತೆಗೆ ಒಂದಷ್ಟು ವಿವಾದಗಳು ಕೂಡ ಸುತ್ತಿಕೊಂಡವು. ಅತಿ ದೊಡ್ಡ ವಿವಾದ ಎದುರಾಗಿದ್ದು ‘ವರಾಹ ರೂಪಂ..’ ಹಾಡಿನ ಕಾರಣದಿಂದ. ಅಜನೀಶ್ ಲೋಕನಾಥ್ ಸಂಗೀತ ನೀಡಿದ ಈ ಹಾಡಿನ ಮೇಲೆ ಕೃತಿ ಚೌರ್ಯದ ಆರೋಪ ಎದುರಾಯಿತು.

ಅಷ್ಟೇ ಅಲ್ಲದೇ ಆ ಪ್ರಕರಣ ಕೋರ್ಟ್ ಮೆಟ್ಟಿಲೇರಿತು ಕೂಡ. ಈ ಕೇಸ್ನಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ಸಮಸ್ಯೆ ಎದುರಿಸುವಂತಾಗಿದ್ದು ಅಚ್ಚರಿ. ಆದರೆ ಅವರಿಗೆ ಈಗ ರಿಲೀಫ್ ಸಿಕ್ಕಿದೆ. ಅವರ ಮೇಲಿದ್ದ ಎಫ್ಐಆರ್ಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಮೊದಲು ಕನ್ನಡದಲ್ಲಿ ರಿಲೀಸ್ ಆಗಿದ್ದ ‘ಕಾಂತಾರ’ ಚಿತ್ರವನ್ನು ನಂತರ ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿ ತೆರೆಕಾಣಿಸಲಾಯಿತು. ಕೇರಳದಲ್ಲಿ ಈ ಚಿತ್ರದ ಮಲಯಾಳಂ ವರ್ಷನ್ ಬಿಡುಗಡೆ ಮಾಡಿದ್ದು ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್. ಅವರ ವಿತರಣಾ ಕಂಪನಿ ಮೂಲಕ ‘ಕಾಂತಾರ’ ರಿಲೀಸ್ ಆಯಿತು. ‘ವರಾಹಂ ರೂಪಂ..’ ಹಾಡನ್ನು ಕಾಪಿ ಮಾಡಲಾಗಿದೆ ಎಂದು ಹಾಕಿದ್ದ ಕೇಸ್ನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರ ಹೆಸರನ್ನೂ ಸೇರಿಸಲಾಯಿತು.

ಬಳಿಕ ಎಫ್ಐಆರ್ ದಾಖಲಾಯಿತು. ತಮ್ಮ ಮೇಲೆ ಎಫ್ಐಆರ್ ಹಾಕಿರುವುದನ್ನು ಪ್ರಶ್ನಿಸಿ ಪೃಥ್ವಿರಾಜ್ ಸುಕುಮಾರನ್ ಅವರು ಕೇರಳ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆದಿದ್ದು ಗುರುವಾರ (ಫೆಬ್ರವರಿ 16) ತೀರ್ಪು ಪ್ರಕಟ ಆಗಿದೆ. ‘ಪೃಥ್ವಿರಾಜ್ ಸುಕುಮಾರನ್ ಅವರು ಈ ಸಿನಿಮಾವನ್ನು ವಿತರಣೆ ಮಾಡಿದ್ದಾರೆ ಅಷ್ಟೇ. ಅದಕ್ಕಾಗಿ ಕಾಪಿರೈಟ್ ವಿಷಯದಲ್ಲಿ ಅವರನ್ನು ಅನಗತ್ಯವಾಗಿ ಎಳೆದು ತರಲಾಗಿದೆ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮುಂದಿನ 7 ದಿನಗಳ ಕಾಲ ಯಾವುದೇ ವಿಚಾರಣೆ ಮಾಡಬಾರದು ಎಂದು ತೀರ್ಪು ನೀಡಲಾಗಿದೆ. ‘ಕಾಂತಾರ 2’ ಮಾಡಲು ರಿಷಬ್ ಶೆಟ್ಟಿ ಸಿದ್ಧತೆ:

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಸಿಕ್ಕಿದೆ. ಅವರು ಅವರು ‘ಕಾಂತಾರ 2’ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಜೂನ್ ತಿಂಗಳಲ್ಲಿ ಇದರ ಶೂಟಿಂಗ್ ಆರಂಭ ಆಗುವ ಸಾಧ್ಯತೆ ಇದೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಚಿತ್ರಕ್ಕೆ ‘ಹೊಂಬಾಳೆ ಫಿಲ್ಮ್ಸ್’ ಬಹುಕೋಟಿ ರೂಪಾಯಿ ಬಂಡವಾಳ ಹೂಡಲಿದೆ. ಪಾತ್ರವರ್ಗಕ್ಕೆ ಹೊಸ ಕಲಾವಿದರು ಕೂಡ ಎಂಟ್ರಿ ಆಗಲಿದ್ದಾರೆ.
ನಟ ಪೃಥ್ವಿರಾಜ್ ಸುಕುಮಾರನ್ ಗೆ ಕೇರಳ ಹೈಕೋರ್ಟ್ ರಿಲೀಫ್
- Advertisement -
- Advertisement -

