ಯುವಕರಿಗೆ ಮಾದರಿ ನಡೆ: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಚ್ಚುಗತ್ತಿ ಹೀರೋ ರಾಜವರ್ಧನ್!

ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ರಾಜವರ್ಧನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್ ಡೇ ಖುಷಿಯಲ್ಲಿರುವ ರಾಜವರ್ಧನ್ ಯುವಕರಿಗೆ ಮಾದರಿಯಾಗುವಂತೆ..ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ನೇತ್ರಾದಾನ ಮಾಡಲು ರಾಜವರ್ಧನ್ ನೋಂದಣಿ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಮಿಂಟೋ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುಜಾತಾ ರಾಥೋಡ್, ಡಾ.ಮಂಜುನಾಥ್ ಉಪಸ್ಥಿತರಿದ್ದರು.

ಬಿಚ್ಚುಗತ್ತಿ ಸಿನಿಮಾ ಮೂಲಕ ಸ್ಯಾಂಡಲ್ವುಕಡ್ ಗೆ ಎಂಟ್ರಿ ಕೊಟ್ಟಿದ್ದ ಡಿಂಗ್ರಿ ನಾಗರಾಜ್ ಪುತ್ರ ನಟ ರಾಜವರ್ಧನ್ ಮೊದಲ ಸಿನಿಮಾದಲ್ಲಿ ಭರವಸೆ ನಾಯಕ ಮಿಂಚಿದ್ದಾರೆ. ಸದ್ಯ ಹಿರಣ್ಯ ಸಿನಿಮಾದಲ್ಲಿ ನಟಿಸ್ತಿರುವ ರಾಜವರ್ಧನ್, ಅತ್ತ ಪ್ರಣಯಂ ಸಿನಿಮಾ ಮುಗಿಸಿ ರಿಲೀಸ್ ಗೆ ಎದುರು ನೋಡ್ತಿದ್ದಾರೆ. ಅಂದಹಾಗೇ ಹಿರಣ್ಯ ಚಿತ್ರಕ್ಕೆಪ್ರವೀಣ್ ಅವ್ಯುಕ್ತ್ ನಿರ್ದೇಶನದ ಮಾಡ್ತಿದ್ದು, ವಿಘ್ನೇಶ್ವರ ಮತ್ತು ವಿಜಯ್ ಕುಮಾರ್ ಬಂಡವಾಳ ಹೂಡಿದ್ದಾರೆ. ತೆಲುಗಿನ ಹುಡುಗಿ ರಿಹಾನಾ ನಾಯಕಿಯಾಗಿ ನಟಿಸ್ತಿದ್ದಾರೆ.

About The Author