Friday, July 11, 2025

Latest Posts

ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡಲು ರೆಡಿಯಾದ ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್…!

- Advertisement -

ಸ್ಯಾಂಡಲ್ ವುಡ್ ನ ಕ್ರೇಜಿ ಸ್ಟಾರ್ ರವಿಚಂದ್ರನ್ ಸದ್ಯ ಬಿಎಂ ಗಿರಿರಾಜ್ ಆ್ಯಕ್ಷನ್ ಕಟ್ ಹೇಳಿರುವ ಕನ್ನಡಿಗ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಕ್ರೇಜಿಸ್ಟಾರ್ ತಮ್ಮ ಮುಂದಿನ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಹಾಗಂತ ಈ ಬಾರಿ ರವಿಚಂದ್ರನ್ ಬಣ್ಣ ಹಚ್ಚುವುದರ ಜೊತೆಗೆ ಮತ್ತೊಮ್ಮೆ ಡೈರೆಕ್ಷನ್ ಕ್ಯಾಪ್ ತೊಡಲು ರೆಡಿಯಾಗ್ತಿದ್ದಾರೆ.

ರವಿಚಂದ್ರನ್ ನಿರ್ದೇಶನದ ರಾಜೇಂದ್ರ ಪೊನ್ನಪ್ಪ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಆದ್ರೂ ಮತ್ತೊಂದು ಸಿನಿಮಾ ನಿರ್ದೇಶನ ಮಾಡುವ ಹಂಬಲ ಹೊಂದಿರುವ ಕ್ರೇಜಿ ಲೋಕದ ಸ್ಟಾರ್ ರವಿಚಂದ್ರನ್ ರಾಜಕೀಯ ಕಥೆ ಹೊಂದಿರುವ ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಈ ಸಿನಿಮಾದಲ್ಲಿ ಕೇವಲ ನಿರ್ದೇಶನ ಮಾತ್ರವಲ್ಲ ನಟನೆ ಮಾಡಲು ಸಿದ್ಧರಾಗಿದ್ದಾರಂತೆ.

ಕನ್ನಡಿಗ ಸಿನಿಮಾಕ್ಕೆ ಬಂಡವಾಳ ಹೂಡಿರುವ ಎನ್ ಎಸ್ ರಾಜ್ ಕುಮಾರ್ ಮತ್ತೊಮ್ಮೆ ರವಿಚಂದ್ರನ್ ಜೊತೆ ಕೈ ಜೋಡಿಸಿದ್ದು, ಈ ಸಿನಿಮಾಕ್ಕೂ ಅವರೇ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗ್ತಿದೆ. ಸದ್ಯ ಕನ್ನಡಿಗ ಸಿನಿಮಾದ ನಟನೆ ಜೊತೆ ಮುಂದಿನ ಸಿನಿಮಾಕ್ಕಾಗಿ ಕ್ರೇಜಿಸ್ಟಾರ್ ಸ್ಕ್ರಿಪ್ಟ್ ತಯಾರಿಯಲ್ಲಿರುವ ರವಿಚಂದ್ರನ್, ಸದ್ಯದಲ್ಲಿಯೇ ತಮ್ಮ ಮುಂದಿನ ಸಿನಿಮಾದ ಅಪ್ ಡೇಟ್ ಎಲ್ಲರೊಂದಿಗೆ ಹಂಚಿಕೊಳ್ಳಲಿದ್ದಾರಂತೆ.

- Advertisement -

Latest Posts

Don't Miss