Friday, July 11, 2025

Latest Posts

ರಜನಿ ಹುಟ್ಟುಹಬ್ಬಕ್ಕೆ ಶಿವಣ್ಣ ಸಾಥ್

- Advertisement -

ರಜನಿ ಹುಟ್ಟುಹಬ್ಬಕ್ಕೆ ಶಿವಣ್ಣ ಸಾಥ್..!


ಡಿಸೆಂಬರ್ 12ರಂದು ಸೂಪರ್ ಸ್ಟಾರ್ ರಜಿನಿಕಾಂತ್ 72ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.
ಸ್ಟೈಲ್ ಕಿಂಗ್ ರಜಿನಿಕಾಂತ್ ಅವರ ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.
ಅದೇ ರೀತಿ ಬೆಂಗಳೂರು ರಜಿನಿಕಾಂತ್ ಅಭಿಮಾನಿಗಳು ರಜಿನಿಕಾಂತ್ ಹುಟ್ಟುಹಬ್ಬದ ಹಿಂದಿನ ದಿನ ಅಂದರೆ ಡಿಸೆಂಬರ್ 11ರ ಭಾನುವಾರದಂದು ಬೆಳಗ್ಗೆ 7 ಗಂಟೆಗೆ ಒಂದೊಳ್ಳೆ ಉದ್ದೇಶದಿಂದ ಬೈಕ್ ರೈಡ್ ಅನ್ನು ಹಮ್ಮಿಕೊಂಡಿದ್ದಾರೆ.ಹೃದಯ ಸಂಬಂಧಿ ಖಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನದಂದು ಬೈಕ್ ರೈಡ್ ಆಯೋಜಿಸಿದ್ದು.
ಕರ್ನಾಟಕ ರಾಜ್ಯ ರಜಿನಿಕಾಂತ್ ಫ್ಯಾನ್ಸ್ ಅಸೋಸಿಯೇಶನ್ ತಂಡದ ಸದಸ್ಯರು ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಶಿವ ರಾಜ್‌ಕುಮಾರ್ ಅವರನ್ನು ಈ ಬೈಕ್ ರೈಡ್‌ಗೆ ಆಹ್ವಾನಿಸಿದ್ದಾರೆ ಹಾಗೂ ಶಿವಣ್ಣ ಅವರಿಗೆ ಆಹ್ವಾನ ಪತ್ರಿಕೆ ನೀಡಿದ ಚಿತ್ರಗಳನ್ನೂ ಸಹ ಸಾಮಾಜಿಕ ಜಾಲತಾಣದದಲ್ಲಿ ಹಂಚಿಕೊಂಡಿದ್ದಾರೆ.

- Advertisement -

Latest Posts

Don't Miss