ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಎ.ಹರ್ಷ ಕಾಂಬಿನೇಷನ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ಭಜರಂಗಿ-2. ಎಲ್ಲವೂ ಅಂದುಕೊಂಡಂತೆ ಹಾಗಿದ್ರೆ ಇಷ್ಟರಲ್ಲಾಗಲೇ ತೆರೆಮೇಲೆ ಭಜರಂಗಿ-2 ಸಿನಿಮಾ ಅಬ್ಬರಿಸಬೇಕಿತ್ತು. ಆದ್ರೆ ಚೀನಿ ವೈರಸ್ ಕೊರೋನಾ ಹೊಡೆತಕ್ಕೆ ಎಲ್ಲವೂ ತಲೆಗೆಳಗಾಗಿದೆ. ಶಿವಣ್ಣನ ಹುಟ್ಟುಹಬ್ಬಕ್ಕೆ ರಿಲೀಸ್ ಆದ ಟೀಸರ್ ಸಖತ್ ಸುದ್ದು ಮಾಡಿದ್ದು ಬಿಟ್ರೆ ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ ನೀಡಿರಲಿಲ್ಲ ಚಿತ್ರತಂಡ. ಹೊಸ ಅಪ್ ಡೇಟ್ ಗಾಗಿ ಕಾಯ್ತಿದ್ದ ಕರುನಾಡ ಚಕ್ರವರ್ತಿಯ ಅಭಿಮಾನಿ ಬಳಗಕ್ಕೆ ಇದೀಗ ಎ.ಹರ್ಷ ಅಂಡ್ ಟೀಂ ಸೂಪರ್ ನ್ಯೂಸ್ ವೊಂದನ್ನು ನೀಡಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ಭಜರಂಗಿ-2 ಸಿನಿಮಾದ ಮೋಸ್ಟರ್ ಪೋಸ್ಟರ್ ಜೊತೆಗೆ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಈಗಾಗ್ಲೇ ಆಲ್ ಮೋಸ್ಟ್ ಆಲ್ ಶೂಟಿಂಗ್ ಕಂಪ್ಲೀಟ್ ಮಾಡಿರೋ ಭಜರಂಗಿ-2 ಟೀಂ ಈ ವರ್ಷ ಸಿನಿಮಾ ರಿಲೀಸ್ ಮಾಡುವ ತಯಾರಿಯಲ್ಲಿದೆ. ಸದ್ಯ ಫೆಬ್ರವರಿ ತಿಂಗಳಲ್ಲಿ ರಿಲೀಸ್ ಆಗ್ತಿರೋ ಮೋಷನ್ ಪೋಸ್ಟರ್ ಹಾಗೂ ಟೈಟಲ್ ಟ್ರ್ಯಾಕ್ ನತ್ತ ಶಿವಣ್ಣನ ಭಕ್ತಗಣದ ಚಿತ್ತ ನೆಟ್ಟಿದೆ. ಹೊಸ ಅವತಾರದಲ್ಲಿ ದರ್ಶನ ಕೊಡಲು ರೆಡಿಯಾಗಿರೋ ಹ್ಯಾಟ್ರಿಕ್ ಹೀರೋ ಶಿವಣ್ಣನನ್ನು ನೋಡಿ ಕಣ್ತುಂಬಿಕೊಳ್ಳೋದಿಕ್ಕೆ ಕಾತುರರಾಗಿದ್ದಾರೆ.
ಇನ್ನೂ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ಜೋಡಿಯಾಗಿ ಭಾವನ ನಟಿಸಿದ್ದು, ಶೃತಿ, ಚೆಲುವರಾಜು, ಸೌರವ್ ಲೋಕೇಶ್ ಮತ್ತಿತರರು ಬಣ್ಣ ಹಚ್ಚಿದ್ದಾರೆ.
