www.karnatakatv.net: ತಲಪತಿ ಎಂದೇ ಖ್ಯಾತರಾದ ತಮಿಳು ನಟ ವಿಜಯ್ ಇತ್ತೀಚಿಗಷ್ಟೇ ತನ್ನ ತಂದೆ ತಾಯಿ ಸೇರಿ 11 ಜನರ ವಿರುದ್ದ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಖರಣ ದಾಖಲಿಸಲು ಕಾರಣವಾದ ಪ್ರಮುಖ ವಿಷಯವೆಂದರೆ ವಿಜಯ್ ರವರ ತಂದೆ ಎಸ್. ಚಂದ್ರಶೇಖರ್ ಅವರು ಅಖಿಲಭಾರತ ತಲಪತಿ ವಿಜಯ್ ಮಕ್ಕಳ್ ಅನ್ನೋ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದ್ರು. ಈ ಪಕ್ಷಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ತಮ್ಮ ತಂದೆ ಎಸ್. ಚಂದ್ರಶೇಖರ್, ಖಚಾಂಜಿಯಾಗಿ ತಮ್ಮ ತಾಯಿ ಶೋಭಾ ಚಂದ್ರಶೇಖರ್ ಮತ್ತು ಪದ್ಮನಾಭನ್ ಅವರನ್ನು ನಾಯಕನಾಗಿ ಆಯ್ಕೆಯನ್ನೂ ಮಾಡಿದ್ರು. .
ಈ ಮಧ್ಯೆ ವಿಜಯ್, ನನ್ನ ತಂದೆ ಪಕ್ಷಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಅಂತ ಮೊದಲೇ ಸ್ಪಷ್ಟವಾಗಿ ಹೇಳಿಬಿಟ್ಟಿದ್ರು. ಹೀಗಾಗಿ ಈ ಪಕ್ಷಕ್ಕೆ ಸಂಭದಿಸಿದಂತೆ ನನ್ನ ಹೆಸರನ್ನಾಗಲೀ, ಪೋಟೊವನ್ನಾಗಲೀ ನನ್ನ ಬಗ್ಗೆ ಮತ್ತಾವುದೇ ವಿಷಯಗಳನ್ನು ಪಕ್ಷದ ಅಭಿಮಾನಿಗಳ ಸಂಘಗಳು ತಮ್ಮ ರಾಜಕೀಯ ಆಕಾಂಕ್ಷೆಗಳಿಗೆ ಬಳಸಿಕೊಂಡು ದುರುಪಯೋಗ ಮಾಡಿಕೊಳ್ಳಬಾರದು. ಇಲ್ಲದಿದ್ದರೆ ನಾನು ಅಂಥಹವರ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಅಂತ ಹೇಳಿದ್ದರು. ಈ ವಿಚಾರ ಎಲ್ಲೆಡೆ ಬಾರಿ ಸದ್ದು ಮಾಡಿತ್ತು. ಇನ್ನು ತೆರೆ ಮೇಲೆ ತಂದೆ-ತಾಯಿಗಳ ಮಹತ್ವ ಹೇಳಿಕೊಡೋ ವಿಜಯ ನಿಜ ಜೀವನದಲ್ಲಿ ತಮ್ಮ ಪೋಷಕರ ವಿರುದ್ಧವೇ ತಿರುಗಿಬಿದ್ದಿರೋದು ಎಷ್ಟು ಸರಿ ಅನ್ನೋದು ಸದ್ಯ ಅಭಿಮಾನಿ ವಲಯದಲ್ಲಿ ಮೂಡಿರೋ ಪ್ರಶ್ನೆ.
ಇನ್ನು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಥಳಪತಿ ವಿಜಯ್, ತಮ್ಮ ಹೆಸರನ್ನು ಎಲ್ಲೂ ಬಳಸದಂತೆ ತಡೆಯಾಜ್ಞೆ ಕೋರಿದ್ದು, ತಮ್ಮ ಪೋಷಕರ ಹೆಸರೂ ಸೇರಿದಂತೆ ಅಖಿಲಭಾರತ ತಲಪತಿ ವಿಜಯ್ ಮಕ್ಕಳ್ ಪಕ್ಷದ ಒಟ್ಟು 11 ಮಂದಿ ಮೇಲೆ ಧಾವೆ ಹೂಡಿದ್ದಾರೆ. ಈ ವಿಚಾರಣೆಯನ್ನು ನ್ಯಾಯಲಯ ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ.
೨೦೨೧ರ ಏಪ್ರಿಲ್ ನಲ್ಲಿ ತಮಿಳುನಾಡಿನಲ್ಲಿ ನಡೆದ ಚುನಾವಣೆಯಲ್ಲಿ ವಿಜಯ್, ಸೈಕಲ್ ಏರಿ ವೋಟ್ ಹಾಕೋದಕ್ಕೆ ಮತಗಟ್ಟೆಗೆ ಬಂದಿದ್ರು. ಈ ವಿಚಾರ ಸಾಕಷ್ಟು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿತ್ತು. ವಿಜಯ್ ಧರಿಸಿದ್ದ ಬಟ್ಟೆಯಿಂದ ಹಿಡಿದು ಅವರ ಸೈಕಲ್ ಬಣ್ಣದವರೆಗೂ ಕೇವಲ ರಾಜಕೀಯ ದೃಷ್ಟಿಯ ಸಾಕಷ್ಟು ಊಹಾಪೋಹಗಳು ಎದ್ದಿದ್ವು. ಇನ್ನು ಡಿ ಎಂ ಕೆ ಪಕ್ಷದ ಧ್ವಜದಲ್ಲಿ ಕೆಂಪು ಮತ್ತು ಕಪ್ಪು ಬಣ್ಣ ಇರೋ ಹಿನ್ನೆಲೆಯಲ್ಲಿ ವಿಜಯ್ ರವರು ಪರೊಕ್ಷವಾಗಿ ಡಿಎಂಕೆ ಬೆಂಬಲಕ್ಕೆ ನಿಂತಿದ್ದಾರೆ ಅಂತ ಕೆಲವರು ಲೆಕ್ಕಾಚಾರ ಹಾಕಿದ್ರು.
ಒಟ್ಟಾರೆ ಸಾಮಾಜಿಕ ಜೀವನದಲ್ಲಿ ಗುರುತಿಸಿಕೊಂಡಿರೋ ಸೆಲೆಬ್ರಿಟಿಯಾಗಿರೋ ವಿಜಯ ತಮ್ಮ ಹೆತ್ತ ತಂದೆ ತಾಯಿ ವಿರುದ್ದವೇ ಈ ರೀತಿ ತಿರುಗಿ ಬಿದ್ದಿರೋದು ಸರಿಯಲ್ಲ ಅಂತ ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸ್ತಿದ್ದಾರೆ. ಅದಾಗ್ಯೂ ಡಿಎಂಕೆ ಪಕ್ಷಕ್ಕೆ ಬೆಂಬಲ ನೀಡೋದಕ್ಕಾಗಿ ತಮ್ಮ ತಂದೆಯ ಪಕ್ಷವನ್ನ ಬೆಂಬಲಿಸೋದಕ್ಕೆ ವಿಜಯ್ ಹಿಂದೇಟು ಹಾಕ್ತಿದ್ದಾರೆ ಅಂತ ಹೇಳಲಾಗ್ತಿದೆ.