ಬೆಂಗಳೂರು: ಅಭಿನಯ ಭಾರ್ಗವ, ಸಾಹಸಿಂಹ ವಿಷ್ಣುವರ್ಧನ್ ಅವರ ಮನೆ ಗೃಹ ಪ್ರವೇಶ ಅದ್ದೂರಿಯಾಗಿ ನೆರವೇರಿದ್ದು, ಮನೆಗೆ ‘ವಲ್ಮೀಕ’ ಎಂದು ಹೆಸರಿಟಿದ್ದಾರೆ. ಕಳೆದ ಮೂರು ವರ್ಷದಿಂದ ಮನೆಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು, ಈಗ ಸಂಭ್ರಮದಿಂದ ಗೃಹ ಪ್ರವೆಶ ಮಾಡಿದ್ದಾರೆ. ವಿಷ್ಣುದಾದ ಬಾಳಿ ಬದುಕಿದ ಮನೆ ಈಗ ಹೊಸ ಲುಕ್ ನಲ್ಲಿ ಮಿಂಚುತ್ತಿದೆ. ಭಾರತಿ ವಿಷ್ಣುವರ್ಧನ್, ವಿಷ್ಣು ಪುತ್ರಿ ಕೀರ್ತಿ, ಅಳಿಯ ಅನಿರುದ್ಧ್ ಅವರು ಎಲ್ಲರನ್ನೂ ಆತ್ಮೀಯವಾಗಿ ಗೃಹ ಪ್ರವೇಶದ ಕಾರ್ಯಕ್ರಮಕ್ಕೆ ಬರಮಾಡಿಕೊಂಡಿದ್ದಾರೆ.
ದೆಹಲಿಯಲ್ಲಿ ಮತ್ತೊಂದು ಮನಕಲಕುವ ಕೃತ್ಯ : ಮಗನ ಜೊತೆ ಸೇರಿ ಪತಿ ಶವ ತುಂಡು ತುಂಡಾಗಿ ಕತ್ತರಿಸಿದ ಪತ್ನಿ
ವಲ್ಮೀಕ ಮನೆಯ ಗೇಟಿನ ಮುಂಭಾಗದಲ್ಲಿ ಸಿಂಹದ ಕಂಚಿನ ಮುಖವನ್ನುಕೆತ್ತಲಾಗಿದ್ದು ಇದು ನೋಡುಗರನ್ನು ಇನ್ನಷ್ಟು ಸೆಳೆಯುತ್ತದೆ. ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ನಟ ಜಗ್ಗೇಶ್, ಸಂಸದೆ ಸುಮಲತಾ ಅಂಬರೀಶ್, ರಮೇಶ್ ಭಟ್ ಗಿರಿಜಾ ಲೋಕೇಶ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ವಿಷ್ಣುದಾದಾ ಮನೆ ಹೊಸ ಲುಕ್ ನೋಡಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.