Monday, October 6, 2025

Latest Posts

ಬಾಲಿವುಡ್‌ ಲವ್‌ಬರ್ಡ್ಸ್‌ ಬಾಳಿಗೆ ಮಹಾಲಕ್ಷ್ಮಿ : ಸಿದ್ಧಾರ್ಥ್‌ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ದಂಪತಿಗೆ ಸಿಕ್ತು ಪ್ರಮೋಷನ್!

- Advertisement -

ಮುಂಬೈ : ಬಾಲಿವುಡ್‌ನ ಖ್ಯಾತ ದಂಪತಿಗಳಾಗಿರುವ ನಟ​​ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಪೋಷಕರಾಗಿದ್ದಾರೆ. ಮುದ್ದಾದ ಹೆಣ್ಣು ಮಗುವನ್ನು ಬರಮಾಡಿಕೊಂಡ ಖುಷಿಯಲ್ಲಿ ಈ ಕಪಲ್ಸ್‌ ಇದ್ದಾರೆ. ಈ ಹಿನ್ನೆಲೆಯಲ್ಲಿ ಈ ಜೋಡಿಗೆ ಸೋಷಿಯಲ್‌ ಮೀಡಿಯಾ ಸೇರಿದಂತೆ, ಎಲ್ಲೆಡೆಯಿಂದ ಗಣ್ಯರು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

ಇನ್ನೂ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಪೋಷಕರಾಗುವ ಮೂಲಕ ಈ ಫೇಮಸ್‌ ಸ್ಟಾರ್ ದಂಪತಿ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಪ್ರವೇಶಿಸಿದ್ದಾರೆ. ಹೀಗಾಗಿ ಈ ಲವ್​​​ಬರ್ಡ್ಸ್​
ಕಿಯಾರಾ ಹಾಗೂ ಸಿದ್ಧಾರ್ಥ್‌ ಜೋಡಿಗೆ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳು ತಮ್ಮ ಕಂಗ್ರಾಜ್ಯುಲೇಷನ್ಸ್‌ ಹೇಳುತ್ತಿದ್ದಾರೆ.

ಮುಂಬೈನ ಗಿರ್ಗಾಂವ್‌ನಲ್ಲಿರುವ ಹೆಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಇಂದು ಸಿದ್ಧಾರ್ಥ್‌ ಹಾಗೂ ಕಿಯಾರಾ ತಮ್ಮ ಅಧಿಕೃತ​ ಇನ್‌ಸ್ಟಾಗ್ರಾಮ್‌ ಖಾತೆಗಳಲ್ಲಿ ಜಂಟಿ ಪೋಸ್ಟ್‌ ಮೂಲಕ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಅಲ್ಲದೆ ಈ ಜೋಡಿಯು ಕಳೆದ 2023ರ ಫೆಬ್ರವರಿಯಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅದ್ದೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ​ ಸೋಷಿಯಲ್​​ ಮೀಡಿಯಾ ಪ್ಲ್ಯಾಟ್​​ಫಾರ್ಮ್​​ಗಳಲ್ಲಿ ಸಂತಸದ ಸುದ್ದಿ ಹಂಚಿಕೊಂಡ ನಟ ನಟಿ, “ನಮ್ಮ ಹೃದಯಗಳು ತುಂಬಿವೆ, ನಮ್ಮ ಪ್ರಪಂಚವು ಬದಲಾಗಿದೆ. ನಮಗೆ ಹೆಣ್ಣು ಮಗು ಜನಿಸಿದೆ” ಎಂದು ಬರೆದುಕೊಂಡಿದ್ದಾರೆ.

2012ರ ಬ್ಲಾಕ್​​​​ಬಸ್ಟರ್ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾ ಅಭಿಮಾನಿಗಳೂ ಸಹ ನೆಚ್ಚಿನ ನಟನ ಸಂತಸ ಭಾಗಿಯಾಗಿದ್ದಾರೆ. ಚಿತ್ರದ ಪ್ರಮುಖ ಸ್ಟಾರ್‌ಗಳಿಗೆ ಹೆಣ್ಣು ಮಗು ಹುಟ್ಟಿರುವುದು ಕಾಕತಾಳೀಯ ಎಂಬಂತೆ ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾತರೆ. ಈ ಸೂಪರ್ ಹಿಟ್ ಚಿತ್ರದ ಮೂವರು ಲೀಡ್​ ಸ್ಟಾರ್​ಗಳಾದ ಆಲಿಯಾ ಭಟ್, ವರುಣ್ ಧವನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಹೆಣ್ಣುಮಗುವಿನ ಪೋಷಕರು ಎನ್ನುವುದೇ ದೊಡ್ಡ ವಿಶೇಷ. ಬಾಲಿವುಡ್‌ನಲ್ಲಿ ಹೊಸ ಪೀಳಿಗೆಯನ್ನು ಮುನ್ನಡೆಸಿದ ಈ ಮೂವರೂ ತಮ್ಮ ಹೊಸ ಅಧ್ಯಾಯದಲ್ಲಿ ಬಹಳ ಸಂತಸವಾಗಿದ್ದಾರೆ.

- Advertisement -

Latest Posts

Don't Miss