ರಾಮ ಜನ್ಮ ಭೂಮಿ ಅಯೋಧೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಹಿನ್ನೆಲೆ ರಾಮ ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬ ಭಾರತೀಯನಿಂದ ದೇಣಿಗೆ ಸಂಗ್ರಹಿಸಿರುವ ಕಾರ್ಯ ಭರದಿಂದ ಸಾಗ್ತಿದೆ. ಪ್ರತಿಯೊಬ್ಬರು ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದ ಸಹಾಯ ನೀಡಿ ಕೃತಾರ್ಥರಾಗುತ್ತಿದ್ದಾರೆ. ಈ ಮಹಾನ್ ಕಾರ್ಯದಲ್ಲಿ ಸಾಮಾನ್ಯ ಜನರಿಂದ ಹಿಡಿದು ರಾಜಕೀಯ ನಾಯಕರು, ಚಿತ್ರರಂಗದ ತಾರೆಯರು ದೇಣಿ ನೀಡುತ್ತಿದ್ದಾರೆ.

ಈಗಾಗ್ಲೇ ಕನ್ನಡ ಚಿತ್ರರಂಗದ ಬಹುಭಾಷಾ ನಟಿ ಪ್ರಣೀತಾ, ಹರ್ಷಿಕಾ ಪೂಣಚ್ಚ, ನಟ ಭುವನ್ ಸೇರಿದಂತೆ ಹಲವು ದೇಣಿ ನೀಡಿದ್ದು, ಇದೀಗ ಗೋಲ್ಡನ್ ಬ್ಯೂಟಿ ಅಮೂಲ್ಯ ದಂಪತಿ ರಾಮ ಜನ್ಮ ಭೂಮಿ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ರಾಜಕೀಯದ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಅವಶ್ಯಕತೆ ಇರುವವರಿಗೆ ಸಾಕಷ್ಟು ಸಹಾಯ ಮಾಡಿರೋ ಈ ಜೋಡಿ, ಇದೀಗ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಒಂದೂವರೆ ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಅಮೂಲ್ಯ, ಅಯೋಧ್ಯಾ ಶ್ರೀ ರಾಮನಿಗಾಗಿ ನಮ್ಮ ಕಿರುಕಾಣಿಕೆ. ಪ್ರತಿಯೊಬ್ಬರು ಈ ಕಾರ್ಯದಲ್ಲಿ ಭಾಗಿಯಾಗಿ ಎಂದು ಪೋಸ್ಟ್ ಮಾಡಿದ್ದಾರೆ.

