ಟಾಲಿವುಡ್ ಸಿನಿ ಅಂಗಳದಲ್ಲಿ ಕನ್ನಡತಿಯರದ್ದೇ ಹವಾ. ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ನಭಾ ನಟೇಶ್ ಸೇರಿದಂತೆ ಹಲವು ಕನ್ನಡತಿಯರು ಟಿಟೌನ್ ಮಿಂಚುತ್ತಿದ್ದಾರೆ. ಇತ್ತೀಚೆಗೆಷ್ಟೇ ಕಿಸ್ ಬ್ಯೂಟಿ ಶ್ರೀಲೀಲಾ ಟಾಲಿವುಡ್ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಕನ್ನಡದ ಮತ್ತೊಬ್ಬ ನಟಿ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಸೈಕೋ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬೋಲ್ಡ್ ಬ್ಯೂಟಿ ಅನಿತಾ ಭಟ್, ಇದೀಗ ಟಿಟೌನ್ ಗೆ ಪ್ರವೇಶಿಸಿದ್ದಾರೆ. ಕನ್ನಡದಲ್ಲಿ ಗ್ಲಾಮರ್-ಡಿಗ್ಲಾಮರ್ ರೋಲ್ ಸೇರಿದಂತೆ ಎಲ್ಲಾ ಬಗೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅನಿತಾ ಭಟ್, ‘ಕೃಷ್ಣ ಲಂಕಾ’ ಸಿನಿಮಾ ಮೂಲಕ ಟಾಲಿವುಡ್ ಸಿನಿ ಮಂದಿಯನ್ನು ರಂಜಿಸಲು ರೆಡಿಯಾಗ್ತಿದ್ದಾರೆ. ಪರಚೂರು ರವಿ ನಾಯಕ ನಟನಾಗಿ ಅಭಿನಯಿಸ್ತಿರೋ ಈ ಸಿನಿಮಾದಲ್ಲಿ, ಅನಿತಾ ಭಟ್ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ. ಅಂದಹಾಗೇ ಸಿನಿಮಾಕ್ಕೆ ಕಾರ್ತಿಕೇಯನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಕೃಷ್ಣ ಲಂಕಾ’ ಸಿನಿಮಾ ರೌಡಿಸಂ ಕಥೆಯಧಾರಿತ ಚಿತ್ರವಾಗಿದೆ ಎನ್ನಲಾಗ್ತಿದೆ.

ಸದ್ಯ ಅನಿತಾ ಭಟ್ ನಟನೆಯ ಬಳೆಪೇಟೆ ಟೀಸರ್ ಸಖತ್ ಸೌಂಡ್ ಮಾಡ್ತಿದ್ದು, ಈ ಸಿನಿಮಾ ಎದುರು ನೋಡ್ತಿದ್ದಾರೆ ಬೋಲ್ಡ್ ಬ್ಯೂಟಿ.
