ಮತ್ತೊಮ್ಮೆ ಕನ್ನಡಿಗರ ಹೃದಯ ಕದ್ದ ಸ್ವೀಟಿ ಅನುಷ್ಕಾ… ಸಂಕ್ರಾಂತಿ ಹಬ್ಬಕ್ಕೆ ಕನ್ನಡದಲ್ಲಿಯೇ ಶುಭ ಕೋರಿದ ನಟಿ

ಟಾಲಿವುಡ್ ಅಂಗಳದಲ್ಲಿ ತಮ್ಮ ಸರಳ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಕದ್ದ ಕರಾವಳಿ ಚೆಲುವೆ ಅನುಷ್ಕಾ ಶೆಟ್ಟ, ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಮಕರ ಸಂಕ್ರಾಂತಿ ದಿನವಾದು ಇಂದು ಕನ್ನಡದಲ್ಲಿಯೇ ಕನ್ನಡಿಗರಿಗೆ ಶುಭಾಶಯ ಕೋರಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿರುವ ಅನುಷ್ಕಾ, ‘ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಯಗಳು’ ಎಂದು ಕನ್ನಡದಲ್ಲಿಯೇ ಬರೆದಿದ್ದಾರೆ.

ಸ್ವೀಟಿ ಅನುಷ್ಕಾ ಕನ್ನಡದಲ್ಲಿ ಶುಭ ಕೋರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಕನ್ನಡದಲ್ಲಿಯೇ ಶುಭಾಶಯ ಕೋರಿದ್ದರು. ದಸರಾ ಹಬ್ಬಕ್ಕೂ ಅನುಷ್ಕಾ ಕನ್ನಡದಲ್ಲಿಯೇ ಶುಭಾಶಯ ಕೋರಿ ಕನ್ನಡಿಗರ ಮನಸು ಗೆದ್ದಿದ್ದರು.

ಅನುಷ್ಕಾ ಮೂಲತಃ ಕರಾವಳಿವರು. ಬೆಂಗಳೂರಿನ ಮೌಂಟ್ ಕರ್ಮಲ್ ಕಾಲೇಜ್ ನಲ್ಲಿ ಬಿಸಿಎ ಮಾಡಿದ್ದರು. ಬೆಂಗಳೂರಿನಲ್ಲಿಯೇ ಯೋಗ ಶಿಕ್ಷಕಿಯಾಗಿಯೂ ಕಾರ್ಯ ನಿರ್ವಹಿಸಿದ್ದ ಅನುಷ್ಕಾ ಆ ಬಳಿಕ ಟಾಲಿವುಡ್ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟು ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ.

About The Author