ಕನ್ನಡದ ಹುಡ್ಗಿ, ಗಾಂಧಿನಗರದ ಡಿಂಪಲ್ ಬೆಡಗಿ ರಚಿತಾ ರಾಮ್ ಸಿಂಪಲ್ ಅಂಡ್ ಸ್ಟೈಲೀಶ್ ಚೆಲುವೆ. ಬಟ್ ರಚ್ಚು ಸಖತ್ ಬೋಲ್ಡ್ ಅಂಡ್ ಹಾಟ್ ಆಗಿ ಕಾಣಿಸಿಕೊಳ್ಳೋದು ಕಡಿಮೆನೇ. ಆದ್ರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ರಿಂಗಣಿಸ್ತಿರುವ ಬುಲ್ ಬುಲ್ ಬೆಡಗಿಯ ಹೊಸ ಫೋಟೋ ನೋಡಿ ಅಭಿಮಾನಿಗಳು ಬಾಯ್ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ನಮ್ ಹುಡ್ಗಿ ರಚಿತಾ ಹೀಗೆಲ್ಲಾ ಕಾಣಿಸಿಕೊಳ್ತಿರೋದು ಸರಿಯಲ್ಲ ಅಂತಾ ರಚ್ಚು ಫ್ಯಾನ್ಸ್ ರಾಂಗ್ ಆಗಿದ್ದಾರೆ. ಅಷ್ಟಕ್ಕೂ ಅಸಲಿಗೆ ಇದು ರಚಿತಾ ಪಟನಾ ಅನ್ನೋದನ್ನ ನಾವ್ ಹೇಳ್ತೀವಿ ಕೇಳಿ.

ಹೀಗೆ ರೆಡ್ ಗೌನ್ ತೊಟ್ಟು ಸಖತ್ ಹಾಟ್ ಆಗಿ ಕ್ಯಾಮರಾ ಕಣ್ಣಿಗೆ ರಚ್ಚು ಫೋಸೋ ಕೊಟ್ಟಿರುವ ಫೋಟೋವೊಂದು ಎಲ್ಲೆಡೆ ವೈರಲ್ ಆಗ್ತಿದೆ. ಈ ಫೋಟೋ ನೋಡಿದ ರಚಿತಾ ಅಭಿಮಾನಿಗಳು ನಿಮಗೆ ಇದೆಲ್ಲಾ ಸೂಟ್ ಆಗಲ್ಲ. ಸೀರೆಯಲ್ಲಿಯೇ ಚೆನ್ನಾಗಿ ಒಪ್ಪುತ್ತದೆ. ದಯವಿಟ್ಟು ಇಂತಹ ಬಟ್ಟೆ ಹಾಕಿ ನಿಮ್ಮ ಮೇಲಿನ ಗೌರವ ಕಡಿಮೆ ಮಾಡಿಕೊಳ್ಳಬೇಡಿ ಅಂತಾ ಕಮೆಂಟ್ ಹಾಕಿದ್ದಾರೆ. ಆದ್ರೆ ಈ ಫೋಟೋವನ್ನು ರಚಿತಾ ಅಧಿಕೃತವಾಗಿ ಶೇರ್ ಮಾಡಿಲ್ಲ. ಅಸಲಿಯಾಗಿ ಅದು ರಚಿತಾ ಪಟವಂತು ಅಲ್ಲವೇ ಅಲ್ಲ. ಕಿರುತೆರೆ ನಟಿ ನಿಖಿತಾ ಶರ್ಮಾ ಅವರ ಫೋಟೋ ಅದು. ಆ ಫೋಟೋವನ್ನು ಯಾರು ಮಾರ್ಪ ಮಾಡಿ ರಚಿತಾ ಶಿರ ಕುರಿಸಿದ್ದಾರೆ. ಈ ಫೋಟೋ ನೋಡಿ ರಚಿತಾ ಭಕ್ತಗಣ ಕೋಪಕೊಂಡಿದ್ದಾರೆ.

