ಕರ್ನಾಟಕ ಟಿವಿ : ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಮದುವೆ ಬಗ್ಗೆ ಹಬ್ಬಿದ ಗಾಸಿಪ್ ಗೆ ಬೇಸತ್ತಿದ್ದಾರೆ.. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ರಾಮ್ ನನ್ನ ಸಿನಿಮಾ ವಿಷಯವಾಗಲಿ ಅಥವಾ ವೈಯಕ್ತಿಕ ವಿಷಯವಾಗಲಿ ನನ್ನಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದರೆ ಮಾತ್ರ ಸತ್ಯವೆಂದು ಪರಿಗಣಿಸಿ, ಮನರಂಜನೆಗಾಗಿ ಸುಳ್ಳು ವದಂತಿಗಳನ್ನ ಸೃಷ್ಟಿ ಮಾಡಿದ್ರೆ ಖುಷಿಯಾಗಬಹುದು, ಆದ್ರೆ ಅದರಿಂದ ನನಗೆ ಹಾಗೂ ವಂದಂತಿಯಲ್ಲಿ ಸಿಲುಕಿದ ಸಂಬಂಧಪಟ್ಟ ವ್ಯಕ್ತಿಗಳಿಗೆ ಬೇಸರ ಉಂಟಾಗುತ್ತದೆ ಎಂಬ ವಿಷಯ ತಿಳಿದುಕೊಂಡರೆ ಉತ್ತಮ. ಅತೀ ಪ್ರಮುಖ ವಿಷಯವೆಂದರೆ ಸದ್ಯಕ್ಕೆ ನನ್ನ ಮದುವೆ ನಿಶ್ವಯವಾಗಿಲ್ಲ.. ನಾನು ಮದುವೆ ಆಗುವ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ತಿಳಿಸಿ ಎಲ್ಲರ ಸಮ್ಮುಖದಲ್ಲಿ ಗುರು ಹಿರಿಯರ ಆಶೀರ್ವಾದದೊಂದಿಗೆ ಆಗುತ್ತೇನೆ. ಸುಳ್ಳು ವಂದಂತಿಗಳನ್ನ ನಂಬಿ ವೈಯಕ್ತಿಕ ವಿಚಾರಗಳ ಬಗ್ಗೆ ನಗೆಪಾಟಲು ಮಾಡಬೇಡಿ ಎಂದು ವಿನಮ್ರವಾಗಿ ಮನವಿ ಮಾಡುತ್ತೇನೆ..
ನಿಮ್ಮ
ರಚಿತಾ ರಾಮ್
ಏನಿದು ರಚಿತಾ ರಾಮ್ ವಿಚಾರದಲ್ಲಿ ಕೇಳಿಬರ್ತಿರುವ ಗಾಸಿಪ್..?
ಇಂದು ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ರಚಿತಾ ರಾಮ್ ಶುಭ ಕೋರಿದ್ರು.. ನಿಖಿಲ್ ಜೊತೆ ಇರುವ ಫೋಟೋ ಹಾಕಿ ರಚಿತಾ ರಾಮ್ ಟ್ವೀಟ್ ಮಾಡಿದ್ರು.. ಇದಲ್ಲದೇ ನಿನ್ನೆ ಕುಮಾರಸ್ವಾಮಿ ಕುಟುಂಬ ಶೃಂಗೇರಿ ದೇವಸ್ಥಾನದಲ್ಲಿ ಇರುವಾಗಲೇ ರಚಿತಾ ರಾಮ್ ಸಹ ಶೃಂಗೇರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ರು.. ಈ ಮೊದಲು ಒಂದು ಕಾರ್ಯಕ್ರಮದಲ್ಲಿ ನಾವು ಗೌಡ್ರು.. ಗೌಡ್ರು ಹುಡುಗನನ್ನೇ ಮದುವೆಯಾಗ್ತೀನಿ ಅಂತ ಹೇಳಿದ್ರು.. ಈ ಎಲ್ಲಾ ಬೆಳವಣಿಗೆ ಸಮೀಕರಿಸಿದ ಒಂದಷ್ಟು ಜನ ರಚಿತಾ ರಾಮ್ ಮದುವೆ ಬಗ್ಗೆ ಅಂತೆ ಕಂತೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡ್ತಿದ್ರು. ಇದರಿಂದ್ ನೊಂದುಕೊಂಡ ರಚಿತಾ ರಾಮ್ ಈ ಬಗ್ಗೆ ಸ್ಪಷ್ಷನೆ ಕೊಟ್ಟಿದ್ದಾರೆ..