Movie News: ಮಾರ್ಚ್ 7ಕ್ಕೆ ನಟಿ ರಾಧಿಕಾ ಪಂಡಿತ್ ತಮ್ಮ ಬರ್ತ್‌ಡೇಯನ್ನ ಭರ್ಜರಿಯಾಗಿ ಸೆಲೆಬ್ರೇಟ್ ಮಾಡಿಕೊಂಡಿದ್ದರು. ಆದರೆ ಅವರ ಕೆಲ ತುಣುಕುಗಳಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಆದರೆ ಇದೀಗ ಪೂರ್ತಿ ವೀಡಿಯೋವನ್ನು ರಾಧಿಕಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ರಾಕಿಂಗ್ ಸ್ಟಾರ್ ಪತ್ನಿಯ ಬರ್ತ್‌ಡೇಗೆ ಎಂಥ ಗ್ರ್ಯಾಂಡ್ ಸರ್ಪೈಸ್ ಕೊಟ್ಟಿದ್ದಾರೆ ಅಂತಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಕಲರ್‌ಫುಲ್ ಕೇಕ್ ಕತ್ತರಿಸಿರುವ ನಟಿ ರಾಧಿಕಾ, ಪತಿ ರಾಕಿಂಗ್ ಸ್ಟಾರ್ ಯಶ್, ಮಕ್ಕಳು, ಅಪ್ಪ- ಅಮ್ಮ, ಅಣ್ಣ- ಅತ್ತಿಗೆ ಸೇರಿ ಫ್ರೆಂಡ್ಸ್ ಮತ್ತು ಫ್ಯಾಮಿಲಿಯೊಟ್ಟಿಗೆ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಈ ಬರ್ತ್‌ಡೇ ಸೆಲೆಬ್ರೇಷನ್ ಗೋವಾ ಅಥವಾ ವಿದೇಶದಲ್ಲಿ ನಡೆದ ಹಾಗಿದೆ. ಮೂರ್ನಾಲ್ಕು ಬರ್ತ್‌ಡೇ ಡ್ರೆಸ್‌ನಲ್ಲಿ ಮಿಂಚಿರುವ ರಾಧು, ಆ್ಯಸ್‌ಯ್ಯೂಶ್ವಲ್ ಸಖತ್ ಕ್ಯೂಟ್ ಕಾಣ್ತಿದ್ದಾರೆ.
ಹುಟ್ಟುಹಬ್ಬದ ದಿನ ಒಂದೇ ಒಂದು ಫೋಟೋ ಹಾಕಿದ್ದ ರಾಧೆ, ಇನ್ನೂ ಬಾಕಿ ಇದೆ ಎಂದು ಟ್ಯಾಗ್ ಹಾಕಿದ್ದರು. ಆ ಬಾಕಿ ವೀಡಿಯೋವನ್ನು ಇಂದು ರಿಲೀಸ್ ಮಾಡಿದ್ದಾರೆ. ಇದರಲ್ಲಿ ಕೆಲವರು ರಾಧಿಕಾಗೆ ಬಿಲೆೇಟೆಡ್ ಬರ್ತ್‌ಡೇ ವಿಶ್ ಮಾಡಿದ್ರೆ, ಉಳಿದವರೆಲ್ಲ ಯಶ್ ನೆಕ್ಸ್ಟ್ ಮೂವಿ ಯಾವಾಗ ರಿಲೀಸ್ ಆಗತ್ತೆ ಎಂದು ಪ್ರಶ್ನಿಸಿದ್ದಾರೆ.
ಜೋಶಿಯವರನ್ನ ಸೋಲಿಸುವುದೇ ನಮ್ಮ ಗುರಿ. ಅವರನ್ನು ಎದುರಿಸಲು ನಾನೊಬ್ಬನೇ ಮಠಾಧೀಶ ಸಾಕು: ದಿಂಗಾಲೇಶ್ವರ ಶ್ರೀ
ಕರ್ಕಶ ಶಬ್ದ ಮಾಡುವ ಬೈಕ್ ಗಳಿಗೆ ಬಿಸಿ: ಸ್ಯಾಲೆನ್ಸರ್ ವಶಕ್ಕೆ ಪಡೆದ ಪೊಲೀಸರು