ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಡಿ ಕೆಲ ತಿಂಗಳಿನಿಂದ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆ ಅವರನ್ನು ಇಂದು ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಸಿರಾಟ ಹಾಗೂ ಹೊಟ್ಟೆ ನೋವಿನ ಸಮಸ್ಯೆಯನ್ನು ಜೈಲು ಅಧಿಕಾರಿಗಳ ಬಳಿ ರಾಗಿಣಿ ಹೇಳಿಕೊಂಡಿದ್ದರಂತೆ. ಅಲ್ಲದೇ ಪೋಷಕರು ಬಳಿಯೂ ತಮ್ಮ ಅಳಲು ತೊಡಿಕೊಂಡಿದ್ದರಂತೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಅಂದಹಾಗೇ ರಾಗಿಣಿಯನ್ನು ಡ್ರಗ್ಸ್ ಪ್ರಕರಣದಡಿ ಸಿಸಿಬಿ ಪೊಲೀಸರು ಸೆಪ್ಟೆಂಬರ್ 4 ರಂದು ಬಂಧಿಸಿದ್ದರು. ಆರಂಭದಲ್ಲಿ ಕೆಲ ದಿನ ಸಿಸಿಬಿ ವಶದಲ್ಲಿದ್ದ ರಾಗಿಣಿ ನಂತರ ನ್ಯಾಯಾಂಗ ಬಂಧನದಲ್ಲಿ ಪರಪ್ಪನ ಅಗ್ರಹಾರ ಜೈಲಿ ಸೇರಿದ್ದರು. ರಾಗಿಣಿ ನಂತರ ಬಂಧನಕ್ಕೆ ಒಳಗಾಗಿದ್ದ ಸಂಜನಾ ಗಲ್ರಾನಿಗೆ ಕೆಲವು ದಿನಗಳ ಮುಂಚೆಯಷ್ಟೆ ಆರೋಗ್ಯ ಕಾರಣ ಜಾಮೀನು ನೀಡಲಾಗಿತ್ತು.ಇದೀಗ ರಾಗಿಣಿಗೂ ಆರೋಗ್ಯ ಸಮಸ್ಯೆ ಎದುರಾಗಿದ್ದು, ರಾಗಿಣಿಯೂ ಸಹ ಆರೋಗ್ಯದ ಕಾರಣ ಮುಂದಿಟ್ಟು ಜಾಮೀನಿಗೆ ಅರ್ಜಿ ಹಾಕುವ ಸಾಧ್ಯತೆ ಇದೆ.