Thursday, March 13, 2025

Latest Posts

ತುಪ್ಪದ ಬೆಡಗಿ ರಾಗಿಣಿಯಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್….

- Advertisement -

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಆರೋಪದಡಿ ಜೈಲು ಹಕ್ಕಿಯಾಗಿದ್ದ ನಟಿ ರಾಗಿಣಿ ದ್ವಿವೇದಿ ಜಮೀನಿನ ಮೇಲೆ ರಿಲೀಸ್ ಆಗಿದ್ದು, ಕುಟುಂಬದ ಜೊತೆ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಜೊತೆಗೆ ಡಿಲಿಷಿಯಸ್ ಕುಕ್ಕಿಂಗ್ ಮಾಡ್ತಾ ಆ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡ್ತಾರೆ. ಇದೀಗ ನಟಿ ರಾಗಿಣಿ ಅಭಿಮಾನಿಗಳಿಗೆ ಸಖತ್ ಗುಡ್ ನ್ಯೂಸ್ ವೊಂದನ್ನು ಕೊಟ್ಟಿದ್ದಾರೆ.

‘ಕರ್ವ-3’ ಸಿನಿಮಾದಲ್ಲಿ ರಾಗಿಣಿ

ನಟಿ ರಾಗಿಣಿ ಮತ್ತೆ ಬಣ್ಣ ಹಚ್ಚೋದಿಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕೃಷ್ಣ ಚೈತನ್ಯ ಬಂಡವಾಳ ಹೂಡಿರುವ ವಿಶಾಲ್ ಶೇಖರ್ ನಿರ್ದೇಶನದ ಕರ್ವ-3 ಸಿನಿಮಾದಲ್ಲಿ ರಾಗಿಣಿ ವಿಭಿನ್ನ ಪಾತ್ರವೊಂದರಲ್ಲಿ ಮಿಂಚಲಿದ್ದಾರೆ. ರಾಗಿಣಿ, ಮೇಘನಾ ಗಾಂವ್ಕರ್ ಹಾಗೂ ತಿಲಕ್ ಶೇಖರ್ ಈ ಸಿನಿಮಾದಲ್ಲಿ ಮೇನ್ ಲೀಡ್ ರೋಲ್ ಪ್ಲೇ ಮಾಡಿದ್ದಾರೆ.

ಉಳಿದಂತೆ ಅಜನೀಶ್​ ಲೋಕ್​ನಾಥ್​ ಮ್ಯೂಸಿಕ್, ಲವಿತ್​ ಛಾಯಾಗ್ರಾಹಣದ ಸಿನಿಮಾದಲ್ಲಿರಲಿದೆ. ಸದ್ಯ ಚಿತ್ರತಂಡ ರಾಗಿಣಿ ಭೇಟಿಯಾಗಿ ಮಾತುಕತೆ ನಡೆಸಿದೆ.

- Advertisement -

Latest Posts

Don't Miss