ಮೋಹಕ ತಾರೆ ರಮ್ಯಾ ಎಐಸಿಸಿ ಸೋಷಿಯಲ್ ಮೀಡಿಯಾ ಅಧ್ಯಕ್ಷ ಸ್ಥಾನದಿಂದ ಕಿಕ್ ಔಟ್ ಆದ್ಮೇಲೆ ಯಾರ ಕೈಗೂ ಸಿಗದೇ ಕಣ್ಮರೆಯಾಗಿದ್ರು. ಪದ್ಮಾವತಿ ಎಲ್ಲಿ ಹೋದ್ರು ಅಂತಾ ಅಭಿಮಾನಿಗಳು ಚರ್ಚೆ ನಡೆಸುತ್ತಿರುವಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ರಮ್ಯಾ ಸದಾ ಒಂದಲ್ಲ ಒಂದು ಪೋಸ್ಟ್ ಶೇರ್ ಮಾಡ್ತಾನೆ ಇರ್ತಾರೆ. ಆದ್ರೆ ಇತ್ತೀಚೆಗೆ ಪದ್ಮಾವತಿ ಕಡೆಯಿಂದ ಬಂದ ಮಾಹಿತಿ ಕೇಳಿ ಭಕ್ತಗಣ ಅಚ್ಚರಿಯಾಗಿದೆ.

ರಮ್ಯಾ ತೆಗೆದುಕೊಂಡು ಅತ್ಯುತ್ತಮ ನಿರ್ಧಾರವಿದು..!
ಕೆಲ ಬಾಲಿವುಡ್, ಹಾಲಿವುಡ್ ಸಿನಿಮಾ ಮಂದಿ ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಗಳ್ತಿದ್ದಾರೆ. ಈ ಲಿಸ್ಟ್ ಗೆ ಸ್ಯಾಂಡಲ್ ವುಡ್ ನ ಮೋಹಕ ಬ್ಯೂಟಿ ರಮ್ಯಾ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಈ ಸೋಷಿಯಲ್ ಮೀಡಿಯಾದಲ್ಲಿ ಹಳೇ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
https://www.instagram.com/p/CJaU7uIp_xN/?utm_source=ig_web_copy_link
ನಾನು ಈ ವರ್ಷದ ಆರಂಭದಲ್ಲೇ ಸಸ್ಯಾಹಾರಿಯಾಗಿ ಬದಲಾಗಿದ್ದೇನೆ. ಇದು ನಾನು ತೆಗೆದುಕೊಂಡ ಉತ್ತಮ ನಿರ್ಧಾರ. ದೇಹಕ್ಕೆ ಪ್ರೊಟೀನ್ ಬೇಕು. ಅದಕ್ಕೆ ಮಾಂಸಾಹಾರ ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಆದರೆ ಅದು ನಿಜವೆಂದು ನನಗನಿಸುವುದಿಲ್ಲ. ಮಾಂಸಾಹಾರ ಇಲ್ಲದೆ ನಾನು ಚೆನ್ನಾಗಿಯೇ ಇರುತ್ತೇನೆ. ನನಗೆ ಐಸ್ ಕ್ರೀಮ್ ತುಂಬಾ ಇಷ್ಟ. ಆದರೆ ಇದು ಪ್ರಾಣಿ ಜನ್ಯ ಉತ್ಪನ್ನ. ಇದನ್ನು ಬಿಡುವುದು ತುಂಬಾ ಕಷ್ಟ. ಆದರೂ ನಿರ್ಧಾರ ಗಟ್ಟಿಯಾಗಿರಬೇಕಷ್ಟೆ ಎಂದು ಹೇಳಿದ್ದಾರೆ. ಮೋಹಕ ತಾರೆಯ ಈ ನಿರ್ಧಾರ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದ್ದು, ಎಲ್ಲರೂ ರಮ್ಯಾ ಅಭಿಪ್ರಾಯಕ್ಕೆ ಮೆಚ್ಚುಗೆ ವ್ಯ,ಕ್ತಪಡಿಸುತ್ತಿದ್ದಾರೆ.
