Sunday, December 22, 2024

Latest Posts

ಪ್ರಜ್ವಲ್, ದರ್ಶನ್ ಕೇಸ್- ನಟಿ ರಮ್ಯಾ ಆಕ್ರೋಶ

- Advertisement -

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಕ್ರೌರ್ಯದ ವಿರುದ್ಧ ಸ್ಯಾಂಡಲ್​ವುಡ್ ಮೋಹಕತಾರೆ ರಮ್ಯಾ ಅವರು ಸಾಲು ಸಾಲು ಟ್ವೀಟ್ ಕಿಡಿಕಾರಿದ್ದರು. ಇಂದು ಮತ್ತೊಂದು ಟ್ವೀಟ್ ಮಾಡುವ ಮೂಲಕ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಹೆಚ್​.ಡಿ ರೇವಣ್ಣ, ಮಾಜಿ ಸಂಸದ ಪ್ರಜ್ವಲ್​ ರೇವಣ್ಣ, ಎಂಎಲ್​ಸಿ ಸೂರಜ್ ರೇವಣ್ಣ, ಪೋಕೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ನಟ ದರ್ಶನ್ ಪ್ರಕರಣಗಳು ರಾಷ್ಟ್ರದಲ್ಲಿ ಸುದ್ದಿಯಾಗುತ್ತಿವೆ. ಈ ಸಂಬಂಧ ತಮ್ಮ ಅಧಿಕೃತ ಎಕ್ಸ್​ ಅಕೌಂಟ್​ನಲ್ಲಿ ಪೋಸ್ಟ್​ ಶೇರ್ ಮಾಡಿ ಬೇಸರ ವ್ಯಕ್ತಪಡಿಸಿರುವ ರಮ್ಯಾ ಅವರು, ಹಣವಂತರು ಹಾಗೂ ಬಲವಂತರು ಇಂದು ಸುದ್ದಿಯಲ್ಲಿದ್ದು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಇವರ ಕ್ರೌರ್ಯವನ್ನ ಕರ್ನಾಟಕದ ಸಾಮಾನ್ಯ ಜನರು, ಬಡವರು, ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿದ್ದಾರೆ. ಇಂತಹ ಹೀನ ಕೃತ್ಯಗಳನ್ನ ಬಯಲಿಗೆಳೆದ ಪೊಲೀಸರು ಹಾಗೂ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಕೃತ್ಯಗಳನ್ನ ಶೀಘ್ರ ವಿಚಾರಣೆ ನಡೆಸಿ, ಪ್ರಕರಣವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಾಗ ಮಾತ್ರ ನಿಜವಾಗಿಯೂ ಜನರಿಗೆ ನ್ಯಾಯ ಸಿಕ್ಕಂತೆ ಆಗುತ್ತದೆ. ಒಂದು ವೇಳೆ ನ್ಯಾಯ ಸಿಗದೆ ಇದ್ದರೆ ಜನರಿಗೆ ನಾವು ಯಾವ ಸಂದೇಶ ನೀಡಿದಂತಾಗುತ್ತೆ ಎಂದು ನಟಿ ರಮ್ಯಾ ಪ್ರಶ್ನೆ ಮಾಡಿದ್ದಾರೆ.
ರಮ್ಯಾ ಅವರ ಎಕ್ಸ್ ಪೋಸ್ಟ್​​ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಮೆಂಟ್ಸ್​ ಮಾಡುತ್ತಿದ್ದಾರೆ.

- Advertisement -

Latest Posts

Don't Miss