Tuesday, September 16, 2025

Latest Posts

ಶ್ರೀವಲ್ಲಿ ಅವತಾರದಲ್ಲಿ ನಟಿ ರಶ್ಮಿಕಾ ಮಂದಣ್ಣ…!

- Advertisement -

www.karnatakatv.net : ಬೆಂಗಳೂರು  : ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾ ದಲ್ಲಿ ನಟಿ ರಶ್ಮಿಕಾ ಮಂದಣ್ಣ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದು ಇವತ್ತು ಅದನ್ನ ರಿವೀಲ್ ಮಾಡ್ತೀವಿ ಅಂತ ಹೇಳಿದ್ದ ಚಿತ್ರತಂಡ ಸದ್ಯ ಕಿರಿಕ್ ಬೆಡಗಿಯ ಹೊಸ ಲುಕ್ ಹೊಂದಿರೋ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದೆ.

ಪಕ್ಕಾ ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡಿರೋ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗಿ ನಟಿಸಲಿದ್ದಾರೆ. ಚಿತ್ರದಲ್ಲಿ ಶ್ರೀವಲ್ಲಿ ಅನ್ನೋ ಕ್ಯಾರೆಕ್ಟರ್ ಗೆ ಜೀವ ತುಂಬಿರೋ ರಶ್ಮಿಕಾ ಮಂದಣ್ಣ ಪಾತ್ರ ಹೇಗಿರಲಿದೆ ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇನ್ನು ಈ ಚಿತ್ರ ಡಿಸೆಂಬರ್ ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗ್ತಿದೆ. ಈ ಚಿತ್ರದಲ್ಲಿ ಡಾಲಿ ಧನಂಜಯ ಕೂಡ ನಟಿಸಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ಪುಷ್ಪ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ರೂಪೇಶ್, ಫಿಲಂ ಬ್ಯೂರೋ ಕರ್ನಾಟಕ ಟಿವಿ- ಬೆಂಗಳೂರು

 

- Advertisement -

Latest Posts

Don't Miss