Friday, July 11, 2025

Latest Posts

ಇಳಯದಳಪತಿ ವಿಜಯ್ ಸಿನಿಮಾದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ…?

- Advertisement -

ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ ಈಗ ಗೂಗಲ್ ನ್ಯಾಷನಲ್ ಕ್ರಶ್. ಗಾಂಧಿನಗರದ ಈ ಬ್ಯೂಟಿ ಈಗ ಟಾಲಿವುಡ್, ಕಾಲಿವುಡ್ ಜೊತೆಗೆ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕೊಡಗಿನ ಸ್ವೀಟಿ. ಸದ್ಯ ಪೊಗರು ಸಿನಿಮಾ ಪ್ರಮೋಷನ್ ಜೊತೆಗೆ ಪುಷ್ಪ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರೋ ಲಿಲ್ಲಿಗೆ ಮತ್ತೊಂದು ಮೆಗಾ ಆಫರ್ ಬಂದಿದೆ. ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಜೊತೆ ತೆರೆಮೇಲೆ ರಶ್ಮಿಕಾ ಮಿಂಚೋದು ಪಕ್ಕಾ ಎನ್ನಲಾಗ್ತಿದೆ.

ಈ ಹಿಂದೆ ರಶ್ಮಿಕಾ ಇಳಯದಳಪತಿ ವಿಜಯ್ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಸುದ್ದಿ ಸಖತ್ ವೈರಲ್ ಆಯ್ತು. ಮಾಸ್ಟರ್ ಸಿನಿಮಾದಲ್ಲಿ ಸಾನ್ವಿ ವಿಜಯ್ ಗೆ ಜೋಡಿಯಾಗ್ತಾರೆ ಎನ್ನಲಾಗಿತ್ತು. ಬಟ್ ಆ ಸಿನಿಮಾದಲ್ಲಿ ಮಾಳವಿಕಾ ಮೋಹನ್ ವಿಜಯ್ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡರು.

ಸದ್ಯ ಮಾಸ್ಟರ್ ಸಿನಿಮಾ ತೆರೆಗಪ್ಪಳಿಸಿ ಬೇಜಾನ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದ್ದು, ವಿಜಯ್ 65ನೇ ಸಿನಿಮಾಕ್ಕೆ ಭರ್ಜರಿ ಪ್ರಿಪರೇಷನ್ ನಡೆಸ್ತಿದ್ದಾರೆ. ಈ ಸಿನಿಮಾದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ವಿಜಯ್ ಜೊತೆ ನಾಯಕಿಯಾಗಿ ನಟಿಸಲಿದ್ದಾರಂತೆ.

ವಿಜಯ್ ನಟಿಸಲಿರುವ 65ನೇ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದು, ಈಗಾಗ್ಲೇ ರಶ್ಮಿಕಾ ಮಂದಣ್ಣ ಭೇಟಿಯಾಗಿ ದೀಲಿಪ್ ಮಾತುಕತೆ ನಡೆಸಿದ್ದಾರಂತೆ. ರಶ್ಮಿಕಾ ಕೂಡ ಕಥೆ ಕೇಳಿ ಎಕ್ಸೈಟ್ ಆಗಿದ್ದು, ವಿಜಯ್ ಜೊತೆ ನಟಿಸೋದಿಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಎನೀ ವೇ ಯಾವುದಕ್ಕೂ ಕಾದು ನೋಡೋಣಾ. ಈ ಬಾರಿಯಾದ್ರೂ ಕೊಡಗಿನ ಬ್ಯೂಟಿ ರಶ್ಮಿಕಾ ವಿಜಯ್ ಸಿನಿಮಾದಲ್ಲಿ ನಟಿಸ್ತಾರಾ ನೋಡೋಣಾ…

- Advertisement -

Latest Posts

Don't Miss