ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು, ಅಭಿಮಾನಿಗಳಿಗಾಗಿ ಪೋಟೋ ಹಂಚಿಕೊಂಡ ಸಮಂತಾ

ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ನಟಿ ಸಮಂತಾ ಸ್ವಲ್ಪ ದಿನ ಯಾವುದೇ ಫೋಟೋವನ್ನು ಹಂಚಿಕೊಂಡಿರಲಿಲ್ಲ. ಸಮಂತಾ ಅವರಿಗೆ ಜೀವನದಲ್ಲಿಒಂದಲ್ಲ ಒಂದು ಸಮಸ್ಯೆಗಳು ಬರುತ್ತಿದ್ದರೂ, ಅವರ ವೃತ್ತಿ ಜೀವನ ಚೆನ್ನಾಗಿದೆ. ಅವರಿಗೆ ಆರೋಗ್ಯ ಕೈ ಕೊಡಲು ಶುವಾಗಿದ್ದರಿಂದ ಸಾರ್ವಜನಿಕವಾಗಿ ಮುಖ ತೋರಿಸಿರಲಿಲ್ಲ. ಬಹು ದಿನಗಳ ನಂತರ ಸ್ವಲ್ಪ ಚೇತರಿಸಿಕೊಂಡು ಮತ್ತೆ ಫೋಟೋವನ್ನು ಹಂಚಿಕೊಂಡಿದ್ದು ಅಭಿಮಾನಿಗಳಿಗೆ ಸಂತಸವಾಗಿದೆ.

ಸಮಂತಾ ಅವರಿಗೆ Myositis ಎಂಬ ಕಾಯಿಲೆ ಕಾಣಿಸಿಕೊಂಡಿತ್ತು, ಈ ಕಾಯಿಲೆಯಿಂದ ವ್ಯಕ್ತಿ ಕುಗ್ಗುತ್ತಾನೆ ಮತ್ತು ದೇಹದಲ್ಲಿ ಆಯಾಸ, ಸ್ನಾಯು ಸೆಳೆತವಾಗುತ್ತದೆ. 30 ರಿಂದ 60 ವಯಸ್ಸಿನವರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಸಮಂತಾ ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಿಧಾನವಾಗಿ ಚೇತರಿಸಿಕೊಳ್ಳುತ್ತರುವ ಅವರು ಅಭಿಮಾನಿಗಳಿಗಾಗಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಮಂತಾ ಕೈಯಲ್ಲಿ ಹಲವಾರು ಚಿತ್ರಗಳಿದ್ದು ಸಂಪೂರ್ಣ ಚೇತರಿಸಿಕೊಂಡ ನಂತರ ಮತ್ತೆ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ‘ಯಶೋಧ’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಳ್ಳಲಿದ್ದು, ಟ್ರೇಲರ್ ಮೂಲಕ ಸಾಕಷ್ಟು ಸದ್ದು ಮಡುತ್ತಿದೆ. ನವೆಂಬರ್ 11 ರಂದು ಚಿತ್ರ ಬಿಡುಗಡೆಯಾಗಲಿದೆ. ‘ಶಾಕುಂತಲಂ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಮತ್ತು ‘ಖುಷಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಲಿದ್ದಾರೆ.

About The Author