ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ
ನಟಿಯರು ಎಂದರೆ ಹೀಗೆಯೇ ಇರಬೇಕು ಎನ್ನುವ ಸಾಮಾನ್ಯ ಕಲ್ಪನೆ ಇದೆ. ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಅವರ ದೇಹದ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ .ಹಿಂದೆ ಅವರು ತಾವು ದಪ್ಪಗಿದ್ದ ವಿಷಯವನ್ನು ತಿಳಿಸಿದ್ದರು. ನಾನು 19 ರ ವಯಸ್ಸಿನವರೆಗೆ ಕನ್ನಡಕ ಧರಿಸಿದ ಧಡೂತಿ ಹುಡುಗಿಯಾಗಿದ್ದೆ.
ಕುಟುಂಬದಲ್ಲಿ ಕುರೂಪಿ ಮಗು ನಾನು ಎಂದು ತಮ್ಮನ್ನು ತಾವು ಹೇಳಿಕೊಂಡಿದ್ದ ಸಮೀರಾ ಅವರು ಕೊನೆಗೆ ಸಾಕಷ್ಟು ಶ್ರಮಪಟ್ಟು, ವರ್ಕ್ಔಟ್ ಮಾಡಿ ಚಿತ್ರರಂಗಕ್ಕೆ ಸೈ ಎನಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿರುವ ಬಗ್ಗೆ ಹೇಳಿದ್ದರು.ಹಾಡಿನ ಚಿತ್ರೀಕರಣದ ಮೊದಲು ನನಗೆ ಊಟ ಹಾಕುತ್ತಿರಲಿಲ್ಲ. ದಿನಕ್ಕೆ ಒಂದು ಇಡ್ಲಿ ಮಾತ್ರ ತಿನ್ನಬೇಕಿತ್ತು. ಬ್ಲ್ಯಾಕ್ ಕಾಫಿ ಕೊಡುತ್ತಿದ್ದರು. ಇವಿಷ್ಟೇ ಸೇವಿಸಿ ದಿನಪೂರ್ತಿ ಇರಬೇಕಿತ್ತು. ಇದರಿಂದಾಗಿ ಸಿಕ್ಕಾಪಟ್ಟೆ ಹಸಿವಿನಿಂದ ಬಳಲುತ್ತಿದ್ದೆ’ ಎಂದು ಸಮೀರಾ ಹೇಳಿದ್ದಾರೆ.