Friday, March 14, 2025

Latest Posts

ಜೈಲಿನಂದ ಹೊರಬಂದ ನಟಿ ಸಂಜನಾ ಗಲ್ರಾನಿ ಕೊನೆಗೂ ಪ್ರತ್ಯಕ್ಷ..! ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದೇಕೆ ಗಂಡ-ಹೆಂಡತಿ ಬೆಡಗಿ..?

- Advertisement -

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರದಲ್ಲಿ ಜೈಲು ಹಕ್ಕಿಯಾಗಿದ್ದ ಸಂಜನಾ ಗಲ್ರಾನಿ ಅನಾರೋಗ್ಯದ ಕಾರಣದಿಂದ ಹೈಕೋರ್ಟ್ ನಿಂದ ಜಮೀನು ಪಡೆದು ಇತ್ತೀಚೆಗಷ್ಟೇ ಹೊರ ಬಂದಿದ್ದರು. ಜೈಲಿನಿಂದ ಹೊರ ಬಂದ್ರು ಸಂಜನಾ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಇದೀಗ ಸಂಜನಾ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷರಾಗಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ಆ್ಯಕ್ಟಿವ್ ಆಗಿರುವ ಗಂಡ-ಹೆಂಡತಿ ಬೆಡಗಿ ಸಂಜನಾ, ಇನ್ ಬಾಕ್ಸ್ ನಲ್ಲಿ ಮೆಸೇಜ್ ಮಾಡಿದ ಎಲ್ಲಾ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಪ್ರತಿ ಸಂದೇಶಗಳನ್ನು ನಾನು ಓದಿದ್ದೇನೆ. ನಿಮ್ಮ ಕಾಳಜಿಗೆ ಧನ್ಯವಾದ. ನನ್ನ ಆರೋಗ್ಯ ಸರಿಯಾದ ನಂತರದಲ್ಲಿ ನಾನು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯಳಾಗಿದ್ದೇನೆ. ನಿಮ್ಮ ಪ್ರೀತಿ-ಕಾಳಜಿಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆಯೇ ಎಂದು ಪೋಸ್ಟ್ ವೊಂದನ್ನು ಶೇರ್ ಮಾಡಿದ್ದಾರೆ.

ಅಂದಹಾಗೇ 80ಕ್ಕೂ ಹೆಚ್ಚು ದಿನಗಳ ಕಾಲ ಜೈಲಿನಲ್ಲಿ ಸೆರೆಯಾಗಿದ್ದ ಸಂಜನಾ ಡಿಸೆಂಬರ್ 12ರಂದು ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು.

- Advertisement -

Latest Posts

Don't Miss