Special News:
2ವರ್ಷದ ಬಳಿಕ ಈ ಬಾರಿ ಎಲ್ಲೆಡೆ ಗಣೇಶ ಹಬ್ಬ ಜೋರಾಗಿಯೇ ಇದೆ. ಭಕ್ತರು ನಾನಾ ರೀತಿಯಲ್ಲಿ ಗಣೇಶನನ್ನು ರೂಪಿಸಲು ಯೋಜನೆ ಮಾಡಿದ್ದಾರೆ. ಇಲ್ಲಿ ಗಣೇಶನ ಆಧಾರ್ ಕಾರ್ಡ್ ರೂಪವನ್ನು ನಿರ್ಮಿಸಲಾಗಿದೆ.
ಜೆಮ್ಶೆಡ್ಪುರದಲ್ಲಿರುವ ಈ ಗಣೇಶ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದಾನೆ. ಕಾರಣ, ಆಧಾರ ಕಾರ್ಡ್ ಮಾದರಿಯಲ್ಲಿ ಮಂಟಪದ ವಿನ್ಯಾಸದಲ್ಲಿ ಇವನನ್ನು ಕೂರಿಸಿದ್ದಾರೆ. 6ನೇ ಶತಮಾನದಲ್ಲಿ ಕೈಲಾಸದಲ್ಲಿರುವ ಗಣೇಶನ ವಿಳಾಸ ಮತ್ತು ಅವನ ಜನ್ಮದಿನಾಂಕವನ್ನು ಆಧಾರ್ ಕಾರ್ಡಿನ ಮಾದರಿಯಲ್ಲಿ ನಮೂದಿಸಿದ್ದಾರೆ. ಫೋಟೋ ಸ್ಥಳದಲ್ಲಿ ಗಣೇಶನ ವಿಗ್ರಹ ಇರಿಸಿದ್ದಾರೆ. ಪಕ್ಕದಲ್ಲಿರುವ ಬಾರ್ ಕೋಡ್ ಸ್ಕ್ಯಾನ್ ಮಾಡಿದಾಗ ಗಣೇಶನ ಚಿತ್ರಗಳಿರುವ ಗೂಗಲ್ ಲಿಂಕ್ ಪರದೆ ತೆರೆದುಕೊಳ್ಳುತ್ತದೆ. ಅದರ ಮೇಲೆ ನಮೂದಿಸಲಾದ ವಿಳಾಸ ಹೀಗಿದೆ. ಶ್ರೀ ಗಣೇಶ, S/o ಮಹದೇವ, ಕೈಲಾಸ ಪರ್ವತ, ಮೇಲ್ಮಹಡಿ ಹತ್ತಿರ, ಮಾನಸ ಸರೋವರ, ಕೈಲಾಸ ಪಿನ್‌ಕೋಡ್- 000001. ಮತ್ತು ಹುಟ್ಟಿದ ವರ್ಷ 01/01/600CE. ಹೀಗೆ ಗಣೇಶನನ್ನು ಆಧಾರ್ ಕಾರ್ಡ್ ನಲ್ಲಿ ಬಿಂಬಿಸಲಾಗಿದೆ.
ರಾವಣನಲ್ಲಿದ್ದ ಈ 5 ಗುಣಗಳನ್ನು ನಾವೂ ಕೂಡ ಅಳವಡಿಸಿಕೊಂಡರೆ, ನಮ್ಮ ಯಶಸ್ಸು ಖಚಿತ..
ಅಪ್ಪ ಅಮ್ಮನ ಈ ತಪ್ಪಿನಿಂದ ಮಕ್ಕಳು ಇಂಥ ಶಿಕ್ಷೆ ಅನುಭವಿಸಬೇಕಾಗುತ್ತದೆ…