ಆದಿತಿ ಪ್ರಭುದೇವ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ದಾವಣಗೆರೆಯಲ್ಲಿ ಜನಿಸಿದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದ್ದಾರೆ. ಇವರು ‘ಗುಂಡ್ಯಾನ ಹೆಂಡತಿ’ ಎಂಬ ಕಿರುತೆರೆ ಸೀರಿಯಲ್ ನಿಂದ ಅಭಿನಯ ಆರಂಭಿಸಿದರು. `ನಾಗಕನ್ನಿಕೆ’ ಎಂಬ ಸಿರೀಯಲ್ ನಲ್ಲಿಯೂ ಕೂಡ ಶಿವಾಣಿ ಎಂಬ ಪಾತ್ರ ಮಾಡಿ ಪ್ರೇಕ್ಷಕರ ಮನ ಗೆದ್ದಿದ್ದರು. ನಂತರ ಅಜೇಯ ರಾವ್‌ರ `ಧೈರ್ಯಂ’ ಚಿತ್ರದಿಂದ ಸಿನಿ ಪಯಣವನ್ನು ಆರಂಭಿಸಿದರು. ನಂತರ ಬಜಾರ್, ಸಿಂಗ, ತೋತಾಪುರಿ, ಕುಸ್ತಿ ಹಾಗೂ ಸಾಕಷ್ಟು ಸಿನಿಮಾಗಲ್ಲಿ ನಟಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಿರುವ ನಟಿ ಅದಿತಿ ಪ್ರಭುದೇವ ಅಭಿನಯದ ‘ಅಲೆಕ್ಸಾ’ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದ್ದು, ಇತ್ತೀಚಿಗಷ್ಟೇ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಸಾಹಸ ಸಂಯೋಜನೆಯಲ್ಲಿ ರಾಮಮೂರ್ತಿ ನಗರದ ಬಳಿ ‘ಅಲೆಕ್ಸಾ’ ಸಿನಿಮಾದ ಭರ್ಜರಿ ಕ್ಲೈಮ್ಯಾಕ್ಸ್ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆದಿದೆ.
ಇನ್ನು ಈ ಸಿನಿಮಾದಲ್ಲಿ ಅದಿತಿ ಪ್ರಭುದೇವ ವಿಶೇಷ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಪವನ್ ತೇಜ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಅದಿತಿ ಪ್ರಭುದೇವ ಅವರು ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿದ್ದಾರೆ. ‘ನವರಸನಾಯಕ’ ಜಗ್ಗೇಶ್ ನಟನೆಯ ‘ತೋತಾಪುರಿ’, ಶ್ರೀಮಹದೇವ್ ನಟನೆಯ ‘ಗಜಾನನ & ಗ್ಯಾಂಗ್’, ರಾಮ್ ಗೌಡ ನಟನೆಯ ‘ದಿಲ್‌ಮಾರ್’, ವಿಶ್ವ ನಟನೆಯ ‘ಚಾಂಪಿಯನ್’, ‘ಗೋಲ್ಡನ್ ಸ್ಟಾರ್ ಗಣೇಶ್’ ನಟನೆಯ ‘ತ್ರಿಬ್ಬಲ್ ರೈಡಿಂಗ್’, ಆದಿತ್ಯ ಜೊತೆಗೆ 5D, ಡಾಲಿ ಧನಂಜಯ ಜೊತೆಗೆ ‘Once Upon A Time In Jamaaligudda’, ವಿನಯ್ ರಾಜ್‌ಕುಮಾರ್ ಜೊತೆಗೆ ‘ಅಂದೊಂದಿತ್ತು ಕಾಲ’, ಪ್ರಜ್ವಲ್ ದೇವರಾಜ್ ಜೊತೆಗೆ ‘ಮಾಫಿಯಾ’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರಗಳಲ್ಲಿ ಕೆಲವು ಸಿನಿಮಾಗಳು ರಿಲೀಸ್‌ಗೆ ರೆಡಿಯಿದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ