ಇಂದಿನಿಂದ ರಾಜ್ಯದ ಎಲ್ಲಾ ವಿವಿ, ಪದವಿ ಕಾಲೇಜುಗಳಿಗೆ ಪ್ರವೇಶ ಆರಂಭ

ಬೆಂಗಳೂರು: ರಾಜ್ಯ ಪದವಿ ಕಾಲೇಜುಗಳಲ್ಲಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ( ಯುಯುಸಿಎಂಎಸ್) ತಂತ್ರಾಂಶದ ಮೂಲಕ, ಪ್ರವೇಶ ಪಡೆಯಲು ಅರ್ಜಿ ಸಲ್ಲಿಕೆ ಜುಲೈ.11ರ ಇಂದಿನಿಂದ ಆರಂಭವಾಗಲಿದೆ.

ಜೂನ್ 18ರಂದು ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಫಲಿತಾಂಶದ ಮಾರನೇ ದಿನದಿಂದಲೇ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತಿವೆ. ಬಹುತೇಕ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿವೆ. ಆದ್ರೇ ಸರ್ಕಾರಿ ಕಾಲೇಜುಗಳಲ್ಲಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ತಂತ್ರಾಂಶದಲ್ಲಿ ಕೆಲವು ತಾಂತ್ರಿಕ ಸಮಸ್ಯೆಯಾಗಿದ್ದರಿಂದ ಸರ್ಕಾರ ಜುಲೈ.11ರ ಇಂದಿನಿಂದ ಅಧಿಕೃತವಾಗಿ ಪ್ರವೇಶಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲಿದೆ ಎಂದು ತಿಳಿಸಿದೆ.

ಎನ್ಇಪಿ ಜಾರಿಯಲ್ಲಿರುವುದರಿಂದ ಕಾಲೇಜಿನಲ್ಲಿರುವ ಕೋರ್ಸ್ ಗಳ ಪೈಕಿ ವಿದ್ಯಾರ್ಥಿಗಳು ತಾವು ಇಚ್ಛಿಸಿದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು, ಅರ್ಜಿ ಸಲ್ಲಿಸಬಹುದಾಗಿದೆ. ಈ ವರ್ಷದಿಂದ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಏಕರೀತಿಯ ವೇಳಾಪಟ್ಟಿ ಪ್ರಕಟಿಸಲಿವೆ. ಹೀಗಾಗಿ ಜುಲೈ.11ರ ಇಂದಿನಿಂದ ಪದವಿಗೆ ಪ್ರವೇಶಾತಿ ಆರಂಭವಾಗಲಿದ್ದು, ಆಗಸ್ಟ್ 17ರಿಂದ ತರಗತಿಗಳು ಆರಂಭವಾಗಲಿವೆ.

About The Author