- Advertisement -
Manglore News: ಮಂಗಳೂರು: ನಗರದಲ್ಲಿ ಖ್ಯಾತ ನ್ಯಾಯವಾದಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಗರದ ವಕೀಲ ಬಿ. ಹರೀಶ್ ಆಚಾರ್ಯ ಅವರ ಮೃತದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿ ಮಂಗಳವಾರ ನಗರದ ಬಿಜೈ ಬಾರೆಬೈಲ್ ನ ಅವರ ಮನೆಯಲ್ಲಿ ಪತ್ತೆಯಾಗಿದೆ.
ಹರೀಶ್ ಆಚಾರ್ಯ ಅವರು ಶುಕ್ರವಾರ ನ್ಯಾಯಾಲಯ ಕಲಾಪಕ್ಕೆ ಹಾಜರಾಗಿದ್ದರು. ಜು.9ರಿಂದ ಜು.11ರ ನಡುವೆ ಮನೆಯಲ್ಲಿರುವ ವೇಳೆ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಕೀಲರ ಸಂಬಂಧಿಗಳಿದ್ದಲ್ಲಿ (0824-2220822) ಸಂಪರ್ಕ ಸಂಖ್ಯೆಗೆ ಕರೆ ಮಾಡುವಂತೆ ಪೊಲೀಸರು ಕೋರಿದ್ದಾರೆ.
Free Bus : ಹೆಸರು ಲಕ್ಷ್ಮೀ …!ಲಿಂಗ ಪುರುಷ..?! ಕಂಡಕ್ಟರ್ ಕಕ್ಕಾಬಿಕ್ಕಿ..!
- Advertisement -