Monday, April 21, 2025

Latest Posts

ಅಫ್ಘಾನಿಸ್ತಾನದಲ್ಲಿ ತೀವ್ರ ಆಹಾರ ಸಮಸ್ಯೆ ಎದುರಿಸಲಿದ್ದಾರೆ ; ವಿಶ್ವಸಂಸ್ಥೆ

- Advertisement -

www.karnatakatv.net: ಚಳಿಗಾಲದ ಹೊತ್ತಿಗೆ ಅಫ್ಘಾನಿಸ್ತಾನದಲ್ಲಿರುವ 2.2 ಕೋಟಿಗೂ ಹೆಚ್ಚು ಮಂದಿ ತೀವ್ರ ಆಹಾರ ಸಮಸ್ಯೆ ಎದುರಿಸಲಿದ್ದಾರೆ ಎಂದು ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬೀಸ್ಲೆ ಎಚ್ಚರಿಸಿದ್ದಾರೆ.

‘ಈಗಾಗಲೇ ಯೆಮೆನ್ ಅಥವಾ ಸಿರಿಯಾ ಎದುರಿಸುತ್ತಿರುವ ಮಾನವೀಯ ಬಿಕ್ಕಟ್ಟಿಗಿಂತ ದೊಡ್ಡ ಬಿಕ್ಕಟ್ಟು ಅಫ್ಘಾನ್ ನಲ್ಲಿ ಎದುರಾಗಿದೆ. ಕಾಂಗೋದಲ್ಲಿ ಎದುರಾಗಿರುವ ಆಹಾರ ಭದ್ರತೆಯ ಬಿಕ್ಕಟ್ಟಿಗಿಂತಲೂ ಭೀಕರ ಪರಿಸ್ಥಿತಿ ಅಫ್ಘಾನ್ ನಲ್ಲಿ ನಿರ್ಮಾಣವಾಗಿದೆ ಹಾಗೇ ವಿಶ್ವದಾದ್ಯಂತ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ರಾಷ್ಟ್ರಗಳ ಪೈಕಿ ಅಫ್ಘಾನಿಸ್ತಾನವೂ ಒಂದು. ಅಲ್ಲಿ ಮಾನವೀಯ ಬಿಕ್ಕಟ್ಟು ಕೆಟ್ಟದಾಗಿದೆ ಎನ್ನುವುದಕ್ಕಿಂತ ಆಹಾರ ಅಭದ್ರತೆ ತೀವ್ರವಾಗುತ್ತಿದೆ ಎಂದು ಹೇಳಬಹುದು’ ಎಂದು ಬೀಸ್ಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದುಬೈನಲ್ಲಿ ರಾಯಿಟರ್ಸ್ ಸುದ್ದಿ ಸಂಸ್ಥೆಯೊoದಿಗೆ ಮಾತನಾಡಿದ ಬೀಸ್ಲೆ, ‘ಅಫ್ಗಾನಿಸ್ತಾನದಲ್ಲಿ ಉಂಟಾಗುತ್ತಿರುವ ಆಹಾರ ಕೊರತೆ ಕುರಿತು ತುರ್ತು ಕೈಗೊಳ್ಳದಿದ್ದರೆ, ಆ ದೇಶದಲ್ಲಿ ಮಕ್ಕಳು ಸೇರಿದಂತೆ ಲಕ್ಷಾಂತರ ಪ್ರಜೆಗಳು ಹಸಿವಿನಿಂದ ಸಾಯುವ ಸಾಧ್ಯತೆ ಇದೆ’ ಎಂದು ಎಚ್ಚರಿಸಿದ್ದಾರೆ.

- Advertisement -

Latest Posts

Don't Miss