ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಿಲ್ಲರ್ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ, 12 ಮಕ್ಕಳು ಸಾವು ಪ್ರಕರಣದ ಬಳಿಕ, ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಎಲ್ಲಾ ಬ್ರ್ಯಾಂಡ್‌ಗಳ ಕಾಫ್ ಸಿರಪ್‌ಗಳ ಸ್ಯಾಂಪಲ್ ಸಂಗ್ರಹಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.
ಸಿರಪ್‌ಗಳ ಮಾದರಿ ಸಂಗ್ರಹಿಸಿ ತಪಾಸಣೆಗಾಗಿ ಲ್ಯಾಬ್‌ಗೆ ರವಾನೆ ಮಾಡಲಾಗುತ್ತದೆ. ಜೊತೆಗೆ ಸಿರಪ್ ಕಂಪನಿಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಮಕ್ಕಳಿಗೆ ಸಿರಪ್ ನೀಡುವಾಗ ವೈದ್ಯರ ಸಲಹೆ ಅನುಸರಿಸಿ ಎಂದು, ಪೋಷಕರಿಗೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಸದ್ಯ, ಕೋಲ್ಡ್ರಿಫ್ ಸಿರಪ್ ರಾಜ್ಯಕ್ಕೆ ಸರಬರಾಜು ಮಾಡಲಾಗಿಲ್ಲ. ಸರ್ಕಾರಿ ವಲಯದ ಆಸ್ಪತ್ರೆಗಳಲ್ಲಾಗಲಿ ಅಥವಾ ಪ್ರೈವೇಟ್ ಡಿಸ್ಟ್ರಿಬ್ಯೂಟರ್‌ಗಳು, ಕೋಲ್ಡ್ರಿಫ್ ಕಾಫ್ ಸಿರಪ್ ಖರೀದಿ ಮಾಡಿಲ್ಲ. ಮಕ್ಕಳಲ್ಲಿನ ಕೆಮ್ಮು ಬೇಗ ವಾಸಿಯಾಗುವ ಉದ್ದೇಶದಿಂದ ಡಿಇಜಿ ಪ್ರಮಾಣವನ್ನು, ಕೆಲವು ಬ್ರ್ಯಾಂಡ್‌ಗಳು ಹೆಚ್ಚಾಗಿ ಬಳಸಲ್ಪಟ್ಟಿರುತ್ತವೆ.
ಇದೂ ಕೂಡ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಬೇರೆ ಬ್ರ್ಯಾಂಡ್‌ಗಳ ಕಾಫ್ ಸಿರಪ್‌ಗಳಲ್ಲಿ, ಯಾವ ಪ್ರಮಾಣದಲ್ಲಿ ಡಿಇಜಿ ಅಂಶ ಇದೆ ಅನ್ನೋ ಬಗ್ಗೆ, ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಚೆನ್ನೈ ಕಂಪನಿಯೊಂದ್ರಿಂದ ಕೋಲ್ಡ್ರಿಫ್ ಸಿರಪ್ ತಯಾರು ಮಾಡಲಾಗ್ತಿದ್ದು, ತಮಿಳುನಾಡು ರಾಜ್ಯದಲ್ಲೇ ಈ ಸಿರಪ್ ಅನ್ನು ಬ್ಯಾನ್ ಮಾಡಲಾಗಿದೆ.