ಬೆಂಗಳೂರು : ರೋಹಿತ್ ಚಕ್ರತೀರ್ಥ ಪಠ್ಯಪರಿಷ್ಕರಣಾ ಸಮಿತಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಅದೇ ಬಸವಣ್ಣ ಬೆನ್ನಲ್ಲೇ, ಅಂಬೇಡ್ಕರ್ ಬಗ್ಗೆ ಅವಮಾನ ಮಾಡಿರೋದಾಗಿದೆ.
ಹೌದು… ಬಸವಣ್ಣವರ ಪಠ್ಯ ವಿವಾದದ ಬೆನ್ನಲ್ಲೇ ಇದೀಗ ಅಂಬೇಡ್ಕರ್ ಪಠ್ಯದಲ್ಲೂ ಅವರಿಗೆ ಅಪಮಾನ ಮಾಡಿರೋದಾಗಿ ತಿಳಿದು ಬಂದಿದೆ. ಸಂವಿಧಾನದ ಕುರಿತ ಪಾಠದಲ್ಲಿ ಡಾ.ಬಿ.ಅಂಬೇಡ್ಕರ್ ಗೆ ಇರುವ ಸಂವಿಧಾನ ಶಿಲ್ಪಿ ಬಿರುದನ್ನು ಕೈಬಿಟ್ಟಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.
9 ನೇ ತರಗತಿ ನಮ್ಮ ಸಂವಿಧಾನ ಪಾಠದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗಿದ್ದ ಸಂವಿಧಾನ ಶಿಲ್ಪಿ ಬಿರುದನ್ನು ಕೈಬಿಟ್ಟಿದೆ. ಪಾಠದಲ್ಲಿ ಸಂವಿಧಾನದ ಕರುಡು ರಚನಾ ಸಮಿತಿ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಪಾಠದಲ್ಲೂ ಎಲ್ಲೂ ಸಂವಿಧಾನ ಶಿಲ್ಪಿ ಎಂದು ಹೇಳಿಲ್ಲ. ಈ ಮೂಲಕ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಅಂಬೇಡ್ಕರ್ ಭಾರತದ ಸಂವಿಧಾನ ರಚನೆಗೆ ನೀಡಿದ ಕೊಡುಗೆ ಆಧರಿಸಿ ಸಂವಿಧಾನ ಶಿಲ್ಪಿ ಎಂಬ ಕರೆಯಲಾಗಿದೆ.. ಆದರೆ ರೋಹಿತ್ ಚಕ್ರತೀರ್ಥ ಸಮಿತಿ ಸಂವಿಧಾನ ಶಿಲ್ಪಿ ಬಿರುದಿಗೆ ಕತ್ತರಿ ಹಾಕಲಾಗಿದೆ ಎನ್ನಲಾಗಿದೆ. ಇದೇ ಈಗ ವಿವಾದಕ್ಕೆ ಕಾರಣವಾಗಿದೆ.