Wednesday, September 17, 2025

Latest Posts

ಫಲಿಸಲಿದೆಯೇ ಪ್ರಾರ್ಥನೆ? : ದೆಹಲಿಗೆ ಹಾರಿದ ಡಿಕೆ ಶಿವಕುಮಾರ್‌ ಮುಂದಿನ ನಡೆ ಏನು?

- Advertisement -

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಕುರಿತ ಚರ್ಚೆಗಳಿಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್‌ ಸ್ಟಾಪ್‌ ನೀಡಲು ಯತ್ನಿಸುತ್ತಿದ್ದಾರೆ. ಆದರೆ ಎರಡು ದಿನಗಳ ಕಾಲ ದೆಹಲಿ ದಂಡಯಾತ್ರೆ ಮುಗಿಸಿ ಬಂದ ಬಳಿಕ ಸದ್ಯ ಸಿಎಂ ರಾಜ್ಯದಲ್ಲಿದ್ದಾರೆ.

ಆದರೆ ಕಳೆದರೆಡು ದಿನಗಳ ಹಿಂದಷ್ಟೇ ದೆಹಲಿಯಿಂದ ವಾಪಸ್‌ ಆಗಿದ್ದ ಡಿಕೆ ಶಿವಕುಮಾರ್‌ ಅವರಿಗೆ ಹೈಕಮಾಂಡ್‌ ದಿಢೀರ್‌ ಬುಲಾವ್‌ ನೀಡಿದ್ದು, ಈ ಹಿನ್ನೆಲೆಯಲ್ಲಿ ಡಿಕೆಶಿ ದೆಹಲಿಗೆ ಹಾರಿದ್ದಾರೆ. ಹೀಗಾಗಿ ದಿನಕ್ಕೊಂದು, ಕ್ಷಣಕ್ಕೊಂದು ಟ್ವಿಸ್ಟ್‌ ಪಡೆಯುತ್ತಿರುವ ಈ ಪವರ್‌ ಶೇರಿಂಗ್‌ ವಿಚಾರ ಮತ್ತೆ ಮುನ್ನೆಲೆಗೆ ಬಂದಂತಾಗಿದೆ.

ಆರಂಭದಿಂದಲೂ ಐದು ವರ್ಷ ನಾನೇ ಸಿಎಂ ಎಂದು ಜಪಮಾಡುತ್ತಿರುವ ಸಿದ್ದರಾಮಯ್ಯ ಅವರು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ. ಎಲ್ಲೇ ಹೋದರೂ ಅದೊಂದನ್ನೇ ತಮ್ಮ ಮಂತ್ರದಂತೆಯೇ ಪಠಿಸುತ್ತಿದ್ದಾರೆ. ರಾಜ್ಯದ ಬಳಿಕ ದೆಹಲಿಗೆ ಹೋಗಿದ್ದ ವೇಳೆಯೂ ಸಿದ್ದು ಅದೇ ಮಾತನ್ನು ಪುನರುಚ್ಚರಿಸುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಶಾಕ್‌ ನೀಡಿದ್ದರು. ಈ ಬೆನ್ನಲ್ಲೇ ಡಿಕೆಶಿ ಮೌನಕ್ಕೆ ಶರಣಾಗಿದ್ದರು. ಆದರೆ ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮತ್ತೆ ಹೈಕಮಾಂಡ್‌ ಭೇಟಿಯಾಗಿದ್ದಾರೆ.

ಇನ್ನೂ ದಂಪತಿ ಸಮೇತ ಶಿರಡಿ ಸಾಯಿಬಾಬಾ ದರ್ಶನ ಮಾಡಿ ಅವರು, ಶ್ರದ್ಧೆ ನಂಬಿಕೆ ಮತ್ತು ತಾಳ್ಮೆ ಇದ್ದರೆ ಎಲ್ಲವೂ ಸಾಧ್ಯ ಎಂದು ತಮ್ಮ ಸೋಪಿಯಲ್‌ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಅಂದರೆ ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬ ಸಂದೇಶ ನೀಡಲು ಯತ್ನಿಸಿದ್ದಾರೆ. ಅಲ್ಲದೆ ಪವಿತ್ರವಾದ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ ಬಾಬಾರವರ ದಿವ್ಯ ದರ್ಶನ ಪಡೆದಿರುವುದು ನಿಜಕ್ಕೂ ಪುಣ್ಯಕರ ಅನಿಸುತ್ತಿದೆ ಎಂದು ಡಿಕೆ ಶಿವಕುಮಾರ್‌ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ

ಸಿದ್ದರಾಮಯ್ಯ ತಮ್ಮ ನಾಯಕತ್ವವನ್ನು ಭದ್ರ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಲು ಸಾಲು ಹೇಳಿಕೆಗಳನ್ನು ನೀಡುತ್ತಿದ್ದರೂ, ಇವುಗಳನೆಲ್ಲ ಡಿಕೆ ಶಿವಕುಮಾರ್‌ ಸೈಲೆಂಟಾಗಿಯೇ ಗಮನಿಸುತ್ತಿದ್ದಾರೆ. ಹೇಳಿ ಕೇಳಿ ಹೈಕಮಾಂಡ್‌ ನಾಯಕರ ಎದುರು ಹಾಗೂ ಪಕ್ಷದಲ್ಲಿ ತಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಬೇಕೆಂಬ ತಂತ್ರಕ್ಕೆ ಮೊರೆ ಹೋಗಿರುವ ಅವರು ತಮ್ಮ ನಡೆಯಿಂದಲೇ ಎಲ್ಲವನ್ನೂ ಸಾಧಿಸಲು ಹೊರಟಿದ್ದಾರೆ.

ಆದರೆ ಸದ್ಯಕ್ಕೆ ಡಿಕೆಶಿ ಯಾವ ಹೆಜ್ಜೆ ಇಡಲಿದ್ದಾರೆ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇನ್ನೂ ಡಿಸಿಎಂ ಡಿಕೆ ಶಿವಕುಮಾರ್‌ ಯಾವ ನಡೆಯನ್ನು ಅನುಸರಿಸಬಹುದು ಎನ್ನುವುದು ಬಹಳಷ್ಟು ಮುಖ್ಯವಾಗಿದೆ. ಆದರೆ ಉಭಯ ನಾಯಕರ ದೆಹಲಿ ಭೇಟಿಯ ಬಳಿಕ ಏನೆಲ್ಲ ಆಗಿದೆ ಎನ್ನುವುದನ್ನು ನೋಡಿದಾಗ..

ಇನ್ನೂ ಪ್ರಮುಖವಾಗಿ ದೆಹಲಿಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಇಬ್ಬರೂ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿಯವರನ್ನು ಮೀಟ್‌ ಮಾಡದೇ ವಾಪಸ್‌ ಆಗಿದ್ದರು. ಐದು ವರ್ಷ ನಾನೇ ಸಿಎಂ ಎಂದು ಸಿದ್ದು ಹೇಳಿಕೆಯ ಬಳಿಕ 2 ದಿನ ಡಿಕೆ ಶಿವಕುಮಾರ್ ಸೈಲೆಂಟಾಗಿದ್ದರು. ಅಲ್ಲಿಂದ ವಾಪಸ್‌ ಬಂದ ಬಳಿಕ ಶಿರಡಿ ಸಾಯಿಬಾಬಾ ಮೊರೆ ಹೋಗಿದ್ದ ಡಿಕೆ ಶಿವಕುಮಾರ್‌ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

ಅದರೆ ತುರ್ತಾಗಿ ದೆಹಲಿಗೆ ಬರುವಂತೆ ಹೈಕಮಾಂಡ್‌ ನಾಯಕರ ಕರೆಯ ಬಳಿಕ ಪುಣೆಯಿಂದಲೇ ನೇರವಾಗಿ ಅವರು ದೆಹಲಿ ವಿಮಾನ ಹತ್ತಿದ್ದಾರೆ. ಇನ್ನೂ ಅಚ್ಚರಿಯೆಂದರೆ ಈ ಎಲ್ಲ ಬೆಳವಣಿಗೆಗಳನ್ನು ಅಲ್ಲಗಳೆದಿರುವ ಡಿಸಿಎಂ ನನಗೆ ಹೈಕಮಾಂಡ್‌ ಯಾವುದೇ ಆಹ್ವಾನ ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ತಾವು ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಹೊರಟಿರುವುದಾಗಿ ಡಿಕೆ ಶಿವಕುಮಾರ್‌ ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ಅಪಾರ ದೈವಿಕ ಭಕ್ತರಾಗಿರುವ ಡಿಕೆ ಶಿವಕುಮಾರ್‌ ಅವರು ಈಗಾಗಲೇ ತಾಳ್ಮೆಯ ನಡೆಯನ್ನು ಅನುಸರಿಸಿದ್ದಾರೆ. ರಾಜಕೀಯದ ಏರಿಳಿತವಾಗುವ ಪ್ರತಿ ಸಂದರ್ಭದಲ್ಲೂ ದೇವಸ್ಥಾನಗಳಿಗೆ ಮೊರೆ ಇಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗೆಯೇ ಸಾಯಿಬಾಬಾನ ಸನ್ನಿಧಿಯಲ್ಲಿದ್ದಾಗಲೇ ಅವರಿಗೆ ಹೈಕಮಾಂಡ್‌ ಬುಲವಾ ಬಂದಿರುವುದು ಸಾಕಷ್ಟು ಸಂಚಲನಕ್ಕೆ ಎಡೆ ಮಾಡಿಕೊಟ್ಟಿದೆ. ಒಂದೇ ತಿಂಗಳಲ್ಲಿ ಎರಡನೇ ಬಾರಿ ದೆಹಲಿ ವಿಮಾನ ಹತ್ತಿರುವ ಡಿಕೆ ಶಿವಕುಮಾರ್‌ ವಾಪಸ್‌ ಬರುವಾಗ ಇನ್ಯಾವ ಸಂದೇಶ ಹೊತ್ತು ರಾಜ್ಯಕ್ಕೆ ಮರಳುತ್ತಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ.

- Advertisement -

Latest Posts

Don't Miss